ಶ್ರೀನಗರ: ಪಾಕಿಸ್ಥಾನದ ವ್ಯಾಪ್ತಿಯಲ್ಲಿ ಪತನಗೊಂಡಿದ್ದ ಭಾರತೀಯ ಯುದ್ಧ ವಿಮಾನದ ಪೈಲಟ್ ಅಭಿನಂದ್ ಅವರನ್ನು ಬಂಧಿಸಿದ್ದ ಪಾಕಿಸ್ಥಾನ ಯೋಧ ಇಂದು ಭಾರತದ ಗುಂಡಿಗೆ ಬಲಿಯಾಗಿದ್ದಾನೆ.
ಬಾಲಾಕೋಟ್ ಮೇಲೆ ವಾಯುದಾಳಿಯ ಬೆನ್ನಲ್ಲೇ, ನಡೆದ ಬೆಳವಣಿಗೆಗಳಲ್ಲಿ ಭಾರತದ ವಾಯಗಡಿಯಲ್ಲಿ ಪಾಕ್ ಯುದ್ಧ ವಿಮಾನಗಳು ಅಕ್ರಮವಾಗಿ ಪ್ರವೇಶಿಸಿದ್ದವು. ಈ ವೇಳೆ ಎಚ್ಚೆತ್ತ ಭಾರತದ ಯುದ್ಧ ವಿಮಾನಗಳು ಅವುಗಳನ್ನು ಅಟ್ಟಾಡಿಸಿ ಓಡಿಸಿದ್ದವು. ಈ ವೇಳೆ ಅಚಾನಕ್ ಆಗಿ ಪಾಕಿಸ್ಥಾನ ವ್ಯಾಪ್ತಿಯಲ್ಲಿ ಭಾರತದ ಯುದ್ಧ ವಿಮಾನ ಪತನಗೊಂಡಿತ್ತು. ಇದರ ಪೈಲೆಟ್ ಅಭಿನಂದನ್ ವರ್ಧಮಾನ್ ಅವರನ್ನು ಅಲ್ಲಿನ ಯೋಧರು ಬಂಧಿಸಿ, ಚಿತ್ರಹಿಂಸೆ ನೀಡಿದ್ದರು.
ಅಂದು ಅಭಿನಂದನ್ ಅವರನ್ನು ಹಿಡಿದು, ಚಿತ್ರಹಿಂಸೆ ನೀಡಿದ ಪಾಕ್ ಸೇನೆಗೆ ಸೇರಿದ ಯೋಧರಲ್ಲಿ ಸುಬೇದರ್ ಅಹ್ಮದ್ ಖಾನ್ ಎಂಬಾತನೂ ಸೇರಿದ್ದ. ಆದರೆ, ಆಗಸ್ಟ್ 17ರಂದು ನಕ್ಯಾಲ್ ಪ್ರದೇಶದಲ್ಲಿ ಅಹಮ್ಮದ್ ಖಾನ್ ಅತಿಕ್ರಮಣಕಾರರನ್ನು ಭಾರತದ ಭೂಪ್ರದೇಶದೊಳಕ್ಕೆ ನುಸುಳಿಸುವ ಯತ್ನದಲ್ಲಿದದಾಗಲೇ ನಮ್ಮ ಯೋಧರ ಗುಂಡಿಗೆ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ.
ಅಭಿನಂದನ್ ಅವರನ್ನು ಪಾಕಿಸ್ಥಾನ ಸೈನಿಕರು ಬಂಧಿಸಿ ಕರೆದೊಯ್ಯುವ ಫೋಟೋಗಳನ್ನು ಪಾಕ್ ಸೇನೆ ಬಿಡುಗಡೆ ಮಾಡಿತ್ತು. ಇದರಲ್ಲಿ ಅಭಿನಂದನ್ ಅವರನ್ನು ಅಹ್ಮದ್ ಖಾನ್ ಹಿಂದಿನಿಂದ ಹಿಡಿದಿರುವುದು ಕಾಣಿಸುತ್ತದೆ.
Discussion about this post