ಬೆಂಗಳೂರು: ಭಾರತದ ಗಡಿಯೊಳಗೆ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದ ಪಾಕ್ ಉಗ್ರರ ವಿರುದ್ಧ ಭಾರತೀಯ ಯೋಧರ ಅಬ್ಬರಕ್ಕೆ ಶತ್ರುಗಳು ಹಿಂತಿರುಗಿ ನೋಡದೇ ಓಡಿ ಹೋಗಿದ್ದಾರೆ.
ಗಡಿ ನಿಯಂತ್ರಣ ರೇಖೆಯ ಬಾರಾಮುಲ್ಲಾ ಸೆಕ್ಟರ್ ಬಳಿಯಲ್ಲಿ ಇಂದು ಈ ಘಟನೆ ನಡೆದಿದ್ದು, 4 ರಿಂದ 5 ಜನರಿದ್ದ ಗುಂಪೊಂದು ಭಾರತ ಗಡಿಯೊಳಗೆ ನುಸುಳಲು ಪ್ರಯತ್ನ ನಡೆಸಿತ್ತು. ಈ ವೇಳೆ ಗಡಿ ರಕ್ಷಣಾ ಪಡೆಯ ಯೋಧರು ಅವರ ಮೇಲೆ ದಾಳಿ ನಡೆಸಿದ್ದರು.
ಆದರೆ, ಈ ವಿಚಾರ ತಿಳಿದ ಭಾರತೀಯ ಯೋಧರು ಉಗ್ರರ ಮೇಲೆ ದಾಳಿ ನಡೆಸಿದರು. ಈ ವೇಳೆ ಯೋಧರ ಅಬ್ಬರಕ್ಕೆ ಅಕ್ಷರಶಃ ತತ್ತರಿಸಿದ ಉಗ್ರರು ಹಿಂತಿರುಗಿ ನೋಡದೇ ಪಿಒಕೆ ಕಡೆಯಲ್ಲಿ ಓಡಿ ಹೋಗಿದ್ದಾರೆ.
Discussion about this post