ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಲೋಕಸಭಾ ಚುನಾವಣೆಯ #ParliamentElection2024 ಎಲ್ಲ ಹಂತಗಳ ಮತದಾನ ಇಂದು ಮುಕ್ತಾಯವಾಗಿದ್ದು, ಮತದಾನೋತ್ತರ ಸಮೀಕ್ಷೆಗಳ ವರದಿಯೂ ಸಹ ಹೊರಬಿದ್ದು, ಎನ್’ಡಿಎ #NDA ಮತ್ತೆ ಅಧಿಕಾರಕ್ಕೆ ಬರುವುದು ಬಹುತೇಕ ನಿಶ್ಚಿತ ಎಂದಿವೆ.
ಚುನಾವಣಾ ಆಯೋಗದ ಆದೇಶದಂತೆ ಎಲ್ಲ ಹಂತಗಳ ಮತದಾನ ಇಂದಿಗೆ ಮುಕ್ತಾಯವಾಗಿದ್ದು, ಎಕ್ಸಿಟ್ ಪೋಲ್ #ExitPoll ವರದಿ ಪ್ರಕಟಣೆ ಮಾಡಲು ವಿಧಿಸಲಾಗಿದ್ದ ಸಮಯವೂ ಸಹ ಇಂದು ಸಂಜೆ 6.30ಕ್ಕೆ ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಬಹಳಷ್ಟು ಮತದಾನೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಬಹುತೇಕ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್’ಡಿಎ ಮತ್ತೆ ಅಧಿಕಾರಕ್ಕೆ ಏರಲಿದ್ದು ಮೂರನೇ ಬಾರಿ ನರೇಂದ್ರ ಮೋದಿ ಅಧಿಕಾರಕ್ಕೆ ಏರಲಿದ್ದಾರೆ ಎಂದು ಭವಿಷ್ಯ ನುಡಿದಿವೆ.
ಇಂಡಿಯಾ ನ್ಯೂಸ್ ಸಮೀಕ್ಷೆ ಪ್ರಕಾರ ಎನ್’ಡಿಎಗೆ 371 ಸ್ಥಾನ ನೀಡಿದರೆ ಇಂಡಿ ಒಕ್ಕೂಟಕ್ಕೆ 125, ಇತರರಿಗೆ 47 ಸ್ಥಾನ ದೊರೆಯಲಿದೆ.
ಪಿ ಮಾರ್ಕ್ ಪ್ರಕಾರ ಎನ್’ಡಿಎಗೆ 359 ಸ್ಥಾನ, ಇಂಡಿ ಒಕ್ಕೂಟಕ್ಕೆ 154, ಇತರರಿಗೆ 30 ಸ್ಥಾನ ದೊರೆಯಲಿದೆ.
ಮಾಟ್ರಿಜ್ ಪ್ರಕಾರ ಎನ್’ಡಿಎಗೆ 353-368, ಇಂಡಿ ಒಕ್ಕೂಟಕ್ಕೆ 118-133, ಇತರರಿಗೆ 30 ಸ್ಥಾನ ನೀಡಿದೆ.
2014 ರಲ್ಲಿ, ಹೆಚ್ಚಿನ ನಿರ್ಗಮನ ಸಮೀಕ್ಷೆಗಳು ಎನ್’ಡಿಎಗೆ 283 ಸ್ಥಾನಗಳನ್ನು ಮತ್ತು ಯುಪಿಎಗೆ 105 ಸ್ಥಾನಗಳನ್ನು ನೀಡಿತ್ತು. ಎನ್’ಡಿಎ 336 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಯುಪಿಎ 60 ಸ್ಥಾನಗಳನ್ನು ಪಡೆದುಕೊಂಡಿದ್ದರಿಂದ ರಾಷ್ಟ್ರದ ನಾಡಿಮಿಡಿತವನ್ನು ಕಳೆದುಕೊಂಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post