ಕಲ್ಪ ಮೀಡಿಯಾ ಹೌಸ್ | ಪೆದ್ದಂಪಲ್ಲಿ(ತೆಲಂಗಾಣ) |
ತನ್ನ ಹುಟ್ಟುಹಬ್ಬದ ದಿನದಂದೇ ನಾಲ್ಕು ವರ್ಷದ ಮಗುವೊಂದು ಬಿಸಿ ಸಾಂಬಾರ್ ಪಾತ್ರೆಯಲ್ಲಿ ಬಿದ್ದ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಪೆದ್ದಂಪಲ್ಲಿಯಲ್ಲಿ ನಡೆದಿದೆ.
ಮೃತ ಮಗುವನ್ನು ಮೋಕ್ಷಿತ್(4) ಎಂದು ಗುರುತಿಸಲಾಗಿದೆ.
ಮಧುಕರ್ ಎನ್ನುವವರು ಮಲ್ಲಾಪುರ ಎಂಬಲ್ಲಿಣ ಸಮಾಜ ಕಲ್ಯಾಣ ಇಲಾಖೆ ವಸತಿ ಬಾಲಕಿಯರ ಪ್ರೌಢಶಾಲೆಯಲ್ಲಿ ತಾತ್ಕಾಲಿಕ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದರು. ಮಧುಕರ್ ಅವರ ಪತ್ನಿ ಶಾರದಾ ಅವರು ತಮ್ಮ ಎಂಟು ವರ್ಷದ ಮಗಳು ಶ್ರೀಮಹಿತಾ ಹಾಗೂ ಮಗ ಮೋಕ್ಷಿತ್ ಸೇರಿದಂತೆ ಎಲ್ಲರೂ ಹುಡುಗನ ಶಾಲಾ ಆವರಣವಿರುವ ಒಂದು ಕೋಣೆಯಲ್ಲಿ ವಾಸವಾಗಿದ್ದರು.
ಮಧುಕರ್ ಅವರು ವಿದ್ಯಾರ್ಥಿಗಳಿಗಾಗಿ ಅಡುಗೆ ಮಾಡುತ್ತಿದ್ದು, ಸಾಂಬಾರ್ ತಯಾರಿಸಿ, ಬಿಸಿ ಪಾತ್ರೆಯಲ್ಲಿ ಅಲ್ಲೇ ಪಕ್ಕದಲ್ಲಿ ಇಟ್ಟಿದ್ದರು. ಈ ವೇಳೆ ಆಟವಾಡುತ್ತಾ ತೆರಳಿದ ಮೋಕ್ಷಿತ್ ಆಕಸ್ಮಿಕವಾಗಿ ಬಿಸಿ ಸಾಂಬಾರ್ ಪಾತ್ರೆಯಲ್ಲಿ ಬಿದ್ದಿದ್ದಾನೆ. ಇದರಿಂದಾಗಿ ತೀವ್ರ ಸುಟ್ಟಗಾಯಗಳಿಗೆ ಒಳಗಾದ ಮಗು ಎಚ್ಚರ ತಪ್ಪಿದೆ.
ತಕ್ಷಣವೇ ಕರೀಂನಗರದ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಲಾಗಿದೆ. ಅಲ್ಲಿಂದ ವಾರಂಗಲ್ ಮಹಾತ್ಮಗಾಂಧಿ ಸ್ಮಾರಕ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಆದರೆ, ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ಮಗು ಉಸಿರು ಚೆಲ್ಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















