ಕಲ್ಪ ಮೀಡಿಯಾ ಹೌಸ್ | ಪೆದ್ದಪಲ್ಲಿ |
ದಕ್ಷಿಣ ಭಾರತದ ಬಹಳಷ್ಟು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಪ್ರವಾಹ ಉಂಟಾಗಿದೆ. ಇಂತಹ ಪರಿಸ್ಥಿತಿಯಿಂದಾಗಿ ಲಕ್ಷಾಂತರ ಮಂದಿ ನೆರೆ ಪೀಡಿತರಾಗಿದ್ದು, ಮನೆ ಹಾಗೂ ಆಹಾರವಿಲ್ಲದೇ ಪರದಾಡುವಂತಾಗಿದೆ.
ಇಂತಹ ಪರಿಸ್ಥಿತಿಯಿಂದ ನಲುಗುತ್ತಿರುವ ತೆಲಂಗಾಣದ ಪೆದ್ದಪಲ್ಲಿಯಲ್ಲಿನ ಮಂಥನಿ ಪಟ್ಟಣದಲ್ಲಿ ನಡೆದ ಘಟನೆಯೊಂದರ ವೀಡಿಯೋ ಈಗ ವೈರಲ್ ಆಗಿದೆ.
The real-life Baahubali! Man carries a months-old baby over his head in a basket in flood affected village of Manthani. #TelanganaFloods #TelanganaRain pic.twitter.com/0Y0msp8Jbp
— Inspired Ashu. (@Apniduniyama) July 14, 2022
ಬಾಹುಬಲಿ ಚಿತ್ರದ ಸನ್ನಿವೇಶವನ್ನು ಹೋಲುವ ನಾಟಕೀಯ ದೃಶ್ಯದಲ್ಲಿ, ಒಬ್ಬ ವ್ಯಕ್ತಿಯು ತನ್ನ ತಲೆಯ ಮೇಲೆ ಪ್ಲಾಸ್ಟಿಕ್ ಟಬ್ ಅನ್ನು ಹೊತ್ತುಕೊಂಡು ಮೂರು ತಿಂಗಳ ವಯಸ್ಸಿನ ಗಂಡು ಮಗುವನ್ನು ಅದರಲ್ಲಿ ಬೆಚ್ಚಗಿನ ಬಟ್ಟೆಯಲ್ಲಿ ಸುತ್ತಿಕೊಂಡು ತೆರಳುತ್ತಿರುವ ಘಟನೆ ನಡೆದಿದೆ.
ಪ್ರವಾಹದಲ್ಲಿ ಸಿಲುಕಿದ್ದ ಕುಟುಂಬವೊಂದು ಈ ರೀತಿ ಮಗುವನ್ನು ಹೊತ್ತುಕೊಂಡು ನಾಲ್ಕೈದು ಅಡಿ ಎತ್ತರ ನಿಂತಿರುವ ನೀರಿನಲ್ಲೇ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
Also read: ವ್ಯಾಪಕ ವಿರೋಧ: ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವೀಡಿಯೋ ಚಿತ್ರೀಕರಣ ನಿಷೇಧ ಆದೇಶ ರದ್ದು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post