ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನೀಲಾವರ: ತಮ್ಮ ಚಾರ್ತುಮಾಸ್ಯದ ಹಿನ್ನೆಲೆಯಲ್ಲಿ ನೀಲಾವರ ಮಠದಲ್ಲಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಸ್ವತಃ ಹಾವೊಂದನ್ನು ಹಿಡಿದಿದ್ದು, ಈ ವೀಡಿಯೋ ವೈರಲ್ ಆಗಿದೆ.
ನೀಲಾವರ ಕಲ್ಯಾಣಿ ಬಳಿ ಬಂದಿದ್ದ ಹಾವೊಂದನ್ನು ಶ್ರೀಗಳು ಅತ್ಯಂತ ಸರಳ ವಿಧಾನದಲ್ಲಿ ಹಿಡಿದಿದ್ದಾರೆ.
ತೆಂಗಿನಗರಿಯ ಕಟ್ಟಿಯಿಂದ ಕುಣಿಕೆ ಮಾಡಿ, ಸರಳವಾಗಿ ಹಾವು ಹಿಡಿಯುವುದು ಹೇಗೆ ಎಂಬುದನ್ನು ಸ್ವತಃ ತಾವು ಹಿಡಿದು ತೋರಿಸಿದ್ದಾರೆ ಶ್ರೀಗಳು.
ಹಾಗೆಯೇ, ಇದು ಅತ್ಯಂತ ಸರಳ ವಿಧಾನವಾಗಿದ್ದು, ಹಾವಿಗೂ ಸಹ ಯಾವುದೇ ಅಪಾಯವಿಲ್ಲ, ಹಿಡಿಯುವವರಿಗೂ ಸಹ ಸುಲಭ ಎಂದಿದ್ದಾರೆ.
Get In Touch With Us info@kalpa.news Whatsapp: 9481252093

















