ನವದೆಹಲಿ: ತೈಲ ಬೆಲೆ ಏರಿಕೆ ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸೆ.10ರ ನಾಳೆ ಕರೆ ನೀಡಿರುವ ಬಂದ್‌ಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಸೆ.10ರ ನಾಳೆ ಭಾರತ್ ಬಂದ್‌ಗೆ ಕರೆ ನೀಡಿವೆ. ಆದರೆ, ತೈಲ ಬೆಲೆ ಇಂದು ಈ ಪರಿ ಏರಿಕೆಯಾಗಿರುವ ಹಿಂದಿನ ಕಾರಣಗಳನ್ನು ಅರಿತಿರುವ ಜನ ಸಾಮಾನ್ಯರು ಬಂದ್‌ಗೆ ಕರೆ ನೀಡಿರುವ ಕಾಂಗ್ರೆಸ್‌ಗೆ ಛೀಮಾರಿ ಹಾಕುತ್ತಿದ್ದಾರೆ.
ಪ್ರಮುಖವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಹಾಗೂ ಅದರ ಮುಖಂಡರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿರುವ ಸಾರ್ವಜನಿಕರು ಬಂದ್‌ಗೆ ಬೆಂಬಲವಿಲ್ಲ ಎಂದು ಸಾರಿದ್ದಾರೆ.
ಇನ್ನು, ರಾಜ್ಯದ ಬಹುತೇಕ ನಗರಗಳಲ್ಲಿ ಸೆ.10 ಭಾರತ್ ಬಂದ್‌ಗೆ ನಮ್ಮ ಬೆಂಬಲವಿಲ್ಲ. ಬಂದ್ ದಿನ ನಮ್ಮ ವಹಿವಾಟು ಎಂದಿಗಿಂತಲೂ ಒಂದು ಗಂಟೆ ಹೆಚ್ಚಾಗಿ ನಡೆಯುತ್ತದೆ, ನಮ್ಮ ಮಳಿಗೆ, ಹೋಟೆಲ್‌ಗಳು ಎಂದಿಗಿಂತಲೂ ಮೂರು ಗಂಟೆ ಹೆಚ್ಚಾಗಿ ತೆಗೆದಿರುತ್ತದೆ. ನಾವು ಎಂದಿಗಿಂತಲೂ ಮೂರು ಗಂಟೆ ಹೆಚ್ಚಾಗಿ ಕೆಲಸ ನಿರ್ವಹಿಸುತ್ತೇವೆ ಎಂದು ತಮ್ಮ ಕಚೇರಿ ಹಾಗೂ ಮಳಿಗೆಗಳ ಮುಂದೆ ಅಂಟಿಸಿರುವ ಪೋಸ್ಟರ್‌ಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿವೆ.
ಇನ್ನು, ತೈಲ ಬೆಲೆ ಏರಿಕೆ ಕುರಿತು ಮಾತನಾಡುವ ಕಾಂಗ್ರೆಸ್, ತಾನು ಮಾಡಿದ್ದ ಸಾಲವನ್ನು ಮೋದಿ ಸರ್ಕಾರ ತೀರಿಸಿರುವ ಕುರಿತಾಗಿ ಮಾತನಾಡುವುದಿಲ್ಲ. ಬದಲಾಗಿ, ರಾಜಕೀಯ ಉದ್ದೇಶದಿಂದ ಭಾರತ್ ಬಂದ್‌ಗೆ ಕರೆ ನೀಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನ ಛೀಮಾರಿ ಹಾಕುತ್ತಿದ್ದಾರೆ.
ಹಾಗೆಯೇ, ಕಾಂಗ್ರೆಸ್‌ನ್ನು ಬೆಂಬಲಿಸುವ ಪ್ರತಿಪಕ್ಷಗಳು ಮಾತ್ರ ಬಂದ್‌ಗೆ ಬೆಂಬಲು ವ್ಯಕ್ತಪಡಿಸಿದ್ದರೆ, ಬಹುತೇಕ ಸಂಘಟನೆಗಳು ಬಂದ್‌ಗೆ ಬೆಂಬಲವಿಲ್ಲ ಎಂದಿರುವುದು ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ.
ಪರಿಸ್ಥಿತಿ ಹೀಗಿದ್ದರೂ, ಬಂದ್ ಎಂಬ ಅಸ್ತ್ರವನ್ನು ಉಪಯೋಗಿಸಿಕೊಂಡು ಸಮಾಜ ವಿರೋಧಿ ಶಕ್ತಿಗಳು ಹಾಗೂ ದುಷ್ಕರ್ಮಿಗಳು ಅಶಾಂತಿ ಸೃಷ್ಠಿಸುವ ಸಾಧ್ಯತೆಯಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್‌ಟಿಸಿ ಹಾಗೂ ಖಾಸಗೀ ಬಸ್ ಸಂಚಾರ ಕ್ಷೀಣಿಸುವ ಸಾಧ್ಯತೆಯೂ ಸಹ ಇದೆ.
ಇದರ ಹೊರತಾಗಿ ನೋಡುವುದಾದರೆ, ರಾಜ್ಯ ಸೇರಿದಂತೆ ದೇಶದಾದ್ಯಂತ ಬಂದ್‌ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬಂದ್ ಆಚರಣೆಗೂ ಮುನ್ನವೇ ಕಾಂಗ್ರೆಸ್ ಕೈ ಸುಟ್ಟುಕೊಂಡಿದೆ ಎನ್ನಬಹುದು.
Discussion about this post