ಶಿಕಾರಿಪುರ: ಅವಸರವೇ ಅಪಘಾತಕ್ಕೆ ಕಾರಣ ಎಂಬ ನಿಯಮ ಸಾರಿಗೆ ಇಲಾಖೆಯದ್ದಾಗಿದ್ದರೆ, ಇದನ್ನು ಉಲ್ಲಂಘಿಸಿದರೆ ಎಲ್ಲಿ ಅಪಘಾತ ಸಂಭವಿಸುತ್ತದೆಯೋ ಎಂಬಂತೆ ಸಾರ್ವಜನಿಕರ ಹಿತಾಸಕ್ತಿ ಹಾಗೂ ಸೇವೆಗೆ ತೊಡಗಿರುವ ಅನೇಕ ಬಸ್ಸುಗಳಿವೆ.
ಇತ್ತೀಚಿನ ದಿನಗಳಲ್ಲಿ ಆಧುನಿಕತೆಯು ಹೆಚ್ಚಾದಂತೆ ಇದಕ್ಕೆ ಹೊಂದಿಕೊಂಡು ಹೋಗುವ ಕೆಲಸ ಕೆಲವು ಸಾರಿಗೆ ಇಲಾಖೆಯ ಅಧಿಕಾರಿಗಳು, ಸಾರಿಗೆ ಸೌಲಭ್ಯ ಒದಗಿಸುವ ವಾಹನಗಳು ಸಾರ್ವಜನಿಕರು ಅನುಸರಿಸಬೇಕಿದೆ.
ಸಾರಿಗೆ ಇಲಾಖೆಯ ಮಾಹಿತಿ ಪ್ರಕಾರ ಒಂದು ಸಾರಿಗೆ ವಾಹನದ ವೇಗ ಮಿತಿಯು ಕನಿಷ್ಠ ಒಂದು ಗಂಟೆಗೆ ಐವತ್ತು ಕಿಮೀ ದೂರ ಕ್ರಮಿಸುವ ಪದ್ದತಿಯಂತೆ ಸಾರಿಗೆ ವಾಹನಗಳು ಅನುಸರಿಸ ಬೇಕಿದೆ. ಸಾರಿಗೆ ಇಲಾಖೆಯ ಮಾಹಿತಿಗೂ ಮೀರಿ ಅತಿ ಸಮಯದ ಪರಿವೇ ಇಲ್ಲದೆ ಕಡಿಮೆ ಅವಧಿಗೆ ಅಂದರೆ, 1 ಗಂಟೆಗೆ 30 ಕಿಮೀ ಎಂತೆ ಖಾಸಗಿ ಸಾರಿಗೆ (ಬಸ್) ವಾಹನಗಳು ಪರಿ ಪಾಲಿಸುತ್ತಿವೆ ಅಲ್ಲದೆ ದೂರದೂರುಗಳಿಗೆ ಸಂಚರಿಸುವ ಹಲವಾರು ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ಕಿರಿ ಕಿರಿ ಉಂಟುಮಾಡುವ ಸಾಧ್ಯತೆ ಹೆಚ್ಚಾಗಿದೆ.
ಉದಾಹರಣೆಗೆ, ಶಿವಮೊಗ್ಗದಿಂದ ಶಿಕಾರಿಪುರಕ್ಕೆ 52 ಕಿಮೀ ದೂರದ ಪ್ರಯಾಣವಿದ್ದರೆ, ಖಾಸಗಿ ಬಸ್ ಗಳು ಎಲ್ಲಾ ಗ್ರಾಮಗಳಿಗೂ (ಸಕಲ) ನಿಲುಗಡೆ ಮಾಡುತ್ತಾ ಸಂಚರಿಸಿದರೆ, ಈಗ ನಿರ್ಮಾಣ ಮಾಡಿರುವ ರಾಜ್ಯ ಹೆದ್ದಾರಿ ರಸ್ತೆಗೆ 52 ಕಿಮೀ ದೂರವನ್ನು ಗರಿಷ್ಠ 1 ಗಂಟೆ 10 ನಿಮಿಷದಲ್ಲಿ ಶಿವಮೊಗ್ಗ ಅಥವಾ ಶಿಕಾರಿಪುರ ಸೇರಬಹುದು.
ತಡೆ ರಹಿತ ಬಸ್ ಗಳಾದರೆ ಇದೇ 52 ಕಿಮೀ ದೂರವನ್ನು ಕೇವಲ 50 ನಿಮಿಷದಲ್ಲಿ ತಲುಪಬಹುದು. ಆದರೆ ಇಲ್ಲಿ ಸಂಚರಿಸುವ ಬಸ್ ಗಳು 52 ಕಿಮೀ ದೂರದ ಪ್ರಯಾಣವನ್ನು, ತಡೆಹಿಡಿಯುವ ಬಸ್ ಗಳು 1 ಗಂಟೆ 20 ನಿಮಿಷದಿಂದ 1 ಗಂಟೆ 30 ನಿಮಿಷದವರೆಗೆ ಸಂಚರಿಸುತ್ತವೆ. ಈರೀತಿಯಲ್ಲಿ ತಡೆರಹಿತ ಬಸ್ ಗಳೇ ಈ ಸಮಯದವರೆಗೆ ಸಂಚರಿಸುವಾಗ ಇನ್ನೂ ಸಕಲ ನಿಲುವಿನ ಬಸ್ ಗಳ ಸಮಯ ಹೇಳತೀರದು.
ಸಾಗರ ತಾಲೂಕಿನ ಅನಂತಪುರ ದಿಂದ ಶಿಕಾರಿಪುರಕ್ಕೆ ಅತಿ ಹೆಚ್ಚಿನ ಖಾಸಗಿ ಬಸ್ ಗಳೇ ಸಂಚಾರ ಮಾಡುತ್ತಿರುವುದರಿಂದ, ಕೇವಲ 32 ಕಿಮೀ ದೂರದ ಪ್ರಯಾಣಕ್ಕೆ, ಎಲ್ಲಾ ಗ್ರಾಮಗಳಿಗೂ ನಿಲುಗಡೆ ಮಾಡುತ್ತಾ ಪ್ರಯಾಣಿಸಿದರೆ ಈಗಿನ ರಾಜ್ಯ ಹೆದ್ದಾರಿಗೆ ಗರಿಷ್ಠ 50 ನಿಮಿಷ ಸಾಕಾಗಬಹುದು. ಆದರೆ ಈ ದೂರವನ್ನ 1 ಗಂಟೆ 30 ನಿಮಿಷದವರೆಗೆ ಸಂಚರಿಸುತ್ತವೆ.
ಇದೇ ರೀತಿಯಲ್ಲೇ ಹೊನ್ನಾಳಿಯಿಂದ ಶಿಕಾರಿಪುರಕ್ಕೆ 37 ಕಿಮೀ ದೂರದ ಪ್ರಯಾಣಕ್ಕೂ ಸಹ 1 ಗಂಟೆ 30 ನಿಮಿಷದವರೆಗೆ ಸಂಚಾರ ಮಾಡುತ್ತಿವೆ. ಶಿರಾಳಕೊಪ್ಪ ದಿಂದ ಶಿಕಾರಿಪುರ 20 ಕಿಮೀ ದೂರದ ಪ್ರಮಾಣಕ್ಕೆ, 45 ನಿಮಿಷದವರೆಗೆ, ಮಾಸೂರಿನಿಂದ ಶಿಕಾರಿಪುರಕ್ಕೆ 19 ಕಿಮೀ ದೂರದ ಪ್ರಯಾಣಕ್ಕೆ 45 ನಿಮಿಷ ಈರೀತಿಯಲ್ಲಿ ಸಂಚಾರ ನಡೆಸುತ್ತಿವೆ.
ಇತ್ತೀಚಿನ ದಿನಗಳಿಂದ ರಾಣೆಬೆನ್ನೂರಿನಿಂದ ಶಿಕಾರಿಪುರಕ್ಕೆ ಕೆಲವು ಸರ್ಕಾರಿ ಬಸ್ ಗಳು ಸಂಚಾರ ನಡೆಸುತ್ತಿರುವುದರಿಂದ ಮಾಸೂರಿನಿಂದ ಶಿಕಾರಿಪುರಕ್ಕೆ 30 ನಿಮಿಷಗಳಲ್ಲಿ ಸಂಚಾರ ಮಾಡುತ್ತಿವೆ. ಈ ಸರ್ಕಾರಿ ಬಸ್ ಗಳಿಗೆ ಕಾಂಪಿಟೇಷನ್ ನೀಡುವುದಕ್ಕಾಗಿ, ಖಾಸಗಿ ಬಸ್ ಗಳು ಈ ದೂರವನ್ನು ಕೇವಲ 30 ನಿಮಿಷದಲ್ಲಿಯೇ ಕ್ರಮಿಸುತ್ತಿವೆ. ಈಗಾಗಲೇ ಶಿಕಾರಿಪುರದಲ್ಲಿ ಸರ್ಕಾರಿ ಬಸ್ ಗಳಿಗಾಗಿ ಬಸ್ ನಿಲ್ದಾಣದ ವ್ಯವಸ್ಥೆಯಾಗಿದ್ದು, ಶಿಕಾರಿಪುರ, ಅನಂತಪುರ, ಮಾಸೂರು, ಹೊನ್ನಾಳಿ, ಶಿರಾಳಕೊಪ್ಪ, ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ರೀತಿಯಲ್ಲಿ ಸರ್ಕಾರಿ ಬಸ್ ಗಳಿಗೆ ಪರ್ಮಿಟ್ ನೀಡಿ, ಈ ರೀತಿಯ ಕಿರಿ ಕಿರಿಯನ್ನು ಕೂಡಲೇ ಸಂಬಂಧಪಟ್ಟ ಸಾರಿಗೆ ಇಲಾಖೆಯ ಅಧಿಕಾರಿಗಳು ಸರಿಪಡಿಸಬೇಕಿದೆ.
ಈ ಮಾರ್ಗದಲ್ಲಿ ದೂರದೂರುಗಳಿಗೆ ಸಂಚರಿಸುವ ಸಹಸ್ರಾರು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವದರ ಜೊತೆಗೆ ಸಮಯಕ್ಕೆ ಹೆಚ್ಚಿನ ಮಹತ್ವ ನೀಡಿದಂತಾಗುತ್ತದೆ. ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)
Discussion about this post