ಸ್ಯಾಂಡಲ್’ವುಡ್ ಇತಿಹಾಸದಲ್ಲಿ ಕಂಡು ಕೇರಳರಿಯದ ದಿಗ್ಗಜರ ಮೇಲಿನ ಐಟಿ ದಾಳಿ ನಡೆದ ಬೆನ್ನಲ್ಲೇ, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯ ಪೆಟ್ಟಾ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಷರತ್ತು ವಿಧಿಸಲಾಗಿದೆ ಎಂದು ಹೇಳಲಾಗಿದೆ.
ಪೆಟ್ಟಾಾ ಚಿತ್ರದ ಕರ್ನಾಟಕ ರಾಜ್ಯದ ವಿತರಕರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಇದೇ ವೇಳೆ ಪೆಟ್ಟಾ ಚಿತ್ರ ರಾಜ್ಯದಲ್ಲಿ ಬಿಡುಗಡೆಯಾಗಬೇಕು ಎಂದರೆ ಸದರಿ ವಿತರಕರು ಯಿರುವ ರುವ 8 ಕೋಟಿ ರೂ.ಗಳನ್ನು ಪಾವತಿ ಮಾಡಬೇಕಿದೆ. ಈ ಹಣವನ್ನು ಪಾವತಿ ಮಾಡಿ ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ಇರುವ ತೊಡಕನ್ನು ನಿವಾರಿಸಿಕೊಳ್ಳಬೇಕಿದೆ ಎನ್ನಲಾಗಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಭಾರೀ ನಿರೀಕ್ಷೆ ಹುಟ್ಟಿಸಿರುವ ಪೆಟ್ಟಾ ಚಿತ್ರ ಜನವರಿ 10ರಂದು ವಿಶ್ವದಾದ್ಯಂತ ಬಿಡುಗಡೆಗೆ ಸಿದ್ದವಾಗಿದೆ. ಆದರೆ, ಸ್ಯಾಂಡಲ್’ವುಡ್’ನಲ್ಲಿ ನಡೆದ ಐಟಿ ದಾಳಿ ಈ ಚಿತ್ರ ಬಿಡುಗಡೆಗೆ ರಾಜ್ಯದಲ್ಲಿ ತೊಡಕನ್ನು ತಂದಿದೆಯಾ ಎಂಬುದನ್ನು ಕಾದುನೋಡಬೇಕಿದೆ.
Discussion about this post