ನವದೆಹಲಿ: ವಿಶ್ವಸಂಸ್ಥೆಯ ಅತ್ಯಂತ ಪ್ರತಿಷ್ಠಿತ ಹಾಗೂ ಅತ್ಯುನ್ನತ ಪ್ರಶಸ್ತಿ ಚಾಂಪಿಯನ್‌ಸ್ ಆಫ್ ದಿ ಅರ್ಥ್ ಪುರಸ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಪಾತ್ರವಾಗಿದ್ದಾರೆ.
ಪ್ರಧಾನಿಯಾದ ನಂತರ ದೇಶದ ಪರಿಸರ ಉಳಿಸಲು ಹಾಗೂ 2022ರ ವೇಳೆಗೆ ಭಾರತವನ್ನು ಪ್ಲಾಸ್ಟಿಕ್ ಮುಕ್ತ ಅಥವಾ ಏಕಬಳಕೆಯ ಪ್ಲಾಸ್ಟಿಕ್ ಅನ್ನು ತೊಡೆದು ಹಾಕುವ ಪ್ರತಿಜ್ಞೆ ಮಾಡಿರುವ ಹಿನ್ನೆಲೆಯಲ್ಲಿ ಅತ್ಯುನ್ನತ ಪರಿಸರ ಪ್ರಶಸ್ತಿಗೆ ಮೋದಿಯವರನ್ನು ಆಯ್ಕೆ ಮಾಡಲಾಗಿದೆ.
PM @narendramodi has been awarded the prestigious @UN Champions of the Earth Award.
President @EmmanuelMacron and Shri Modi have been awarded in the Policy Leadership category, for their efforts regarding the International Solar Alliance. https://t.co/zSNk3lS3uy
— PMO India (@PMOIndia) September 26, 2018
ಪಾಲಿಸಿ ಆಫ್ ಲೀಡರ್ ಶಿಪ್ ಎನ್ನುವ ವಿಭಾಗದಲ್ಲಿ ಮೋದಿಯವರಿಗೆ ಈ ಗೌರವ ಪ್ರಾಪ್ತಿಯಾಗಿದೆ.
ಸೌರಶಕ್ತಿ ಬಳಕೆಗೆ ಉತ್ತೇಜನ ನೀಡುವ ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟದ ಸ್ಥಾಪನೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹತ್ವದ ಪಾತ್ರವನ್ನು ವಹಿಸಿದ್ದರು ಹಾಗು ಜಾಗತಿಕ ಪರಿಸರ ಒಪ್ಪಂದದ ಮುಂಚೂಣಿ ಸ್ಥಾನ ವಹಿಸಿದ್ದಕ್ಕಾಗಿ ನರೇಂದ್ರ ಮೋದಿಯವರಿಗೆ ಈ ಗೌರವ ಸಂದಿದೆ.
Discussion about this post