ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಲೋಕಸಭಾ ಚುನಾವಣೆಯ #LoksabhaElection2024 ಕೊನೆಯ ಹಂತದ ಮತದಾನಕ್ಕೆ ಜೂನ್ 30ರಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಅಂದು ಸಂಜೆಯಿಂದ ಎರಡು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿಯವರ #PMNarendraModi ಕಾರ್ಯಕ್ರಮ ನಿಗದಿಗೊಂಡಿದ್ದು, ಕುತೂಹಲ ಮೂಡಿಸಿದೆ.
ಹೌದು… ಮೇ 30ರ ಸಂಜೆಯಿಂದ ಜೂನ್ 1ರ ಸಂಜೆಯವರೆಗೂ ಕನ್ಯಾಕುಮಾರಿಯಲ್ಲಿ #Kanyakumari ತಂಗಲಿರುವ ಪ್ರಧಾನಿಯವರು, ಎರಡೂ ದಿನ ಧ್ಯಾನದಲ್ಲಿ ಕಳೆಯಲಿದ್ದಾರೆ.
ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದರು #SwamiVivekananda ಧ್ಯಾನ ಮಾಡಿದ್ದ ವಿವೇಕಾನಂದ ರಾಕ್ ಧ್ಯಾನ ಮಂದಿರಲ್ಲಿಯೇ ಮೋದಿಯವರು ಎರಡು ದಿನಗಳ ಕಾಲ ಧ್ಯಾನ ಮಾಡಲಿದ್ದಾರೆ.
ಜೂನ್ 30ರ ಸಂಜೆ 4.45ಕ್ಕೆ ಪ್ರಧಾನಿ ಮೋದಿ ಧ್ಯಾನ #Meditate ಕೇಂದ್ರಕ್ಕೆ ಆಗಮಿಸಲಿದ್ದಾರೆ.
ಬಿಗಿ ಭದ್ರತೆ, ಬೀಡುಬಿಟ್ಟ SPG ತಂಡ
ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಹಿನ್ನೆಲೆಯಲ್ಲಿ ಇಡೀ ನಗರದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ತಿರುನಲ್ವೇಲಿ ಡಿಐಜಿಗೆ ಭದ್ರತೆಯ ಉಸ್ತುವಾರಿ ವಹಿಸಲಾಗಿದ್ದು, ಇಡೀ ನಗರದಲ್ಲಿ ಬಿಗಿ ಹದ್ದಿನಕಣ್ಣಿಡಲಾಗಿದೆ. ಪ್ರಮುಖವಾಗಿ ಪ್ರಧಾನಿಯವರು ಎಸ್’ಪಿಜಿ #SPG ತಂಡ ಬೀಡುಬಿಟ್ಟಿದ್ದು, ಈ ಪ್ರದೇಶದ ಮೂಲೆ ಮೂಲೆಯಲ್ಲೂ ತಪಾಸಣೆ ನಡೆಸುತ್ತಿದೆ. ಈ ಸ್ಥಳದ ಭದ್ರತೆಗೆ 2000 ಪೊಲೀಸರನ್ನು ನಿಯೋಜಿಸಲಾಗಿತ್ತದೆ.
2019ರಲ್ಲಿ ಲೋಕಸಭಾ ಚುನಾವಣೆ ಮುಗಿದ ಬಳಿಕ ಮೋದಿ ಕೇದಾರನಾಥದಲ್ಲಿ ಧ್ಯಾನ ಮಾಡಿದ್ದರು.
ಸ್ವಾಮಿ ವಿವೇಕಾನಂದರು ದೇಶದಾದ್ಯಂತ ಸಂಚರಿಸಿದ ನಂತರ ಕನ್ಯಾಕುಮಾರಿಗೆ ಆಗಮಿಸಿದ್ದರು. ಇಲ್ಲಿನ ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದ ಸಂಗಮ ಸ್ಥಳದಲ್ಲಿ ಮುಖ್ಯ ಭೂಭಾಗದಿಂದ ಸುಮಾರು 500 ಮೀಟರ್ ದೂರದಲ್ಲಿರುವ ಬಂಡೆಯ ಮೇಲೆ ಮೂರು ದಿನಗಳ ಕಾಲ ಧ್ಯಾನ ಮಾಡಿದರು. ವಿವೇಕಾನಂದರು ಇಲ್ಲಿ ಜ್ಞಾನೋದಯವನ್ನು #Enlightenment ಪಡೆದರು ಎಂದು ನಂಬಲಾಗಿದೆ.
1892ರ ಡಿಸೆಂಬರ್ 23, 24, 25 ಸ್ವಾಮಿ ವಿವೇಕಾನಂದರು ಇದೇ ಜಾಗದಲ್ಲಿ ಧ್ಯಾನಕ್ಕೆ ಕೂತಿದ್ದರು. ಈ ಕಾರಣಕ್ಕೆ 1970ರಲ್ಲಿ ಇದೇ ಜಾಗದಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಲಾಗಿತ್ತು.
ಹಿಂದೂ ನಂಬಿಕೆಗಳ ಪ್ರಕಾರ, ಈ ಬಂಡೆಯು ಕನ್ಯಾಕುಮಾರಿ (ಪಾರ್ವತಿ) ದೇವಿಯು ಶಿವನಿಗೆ ಭಕ್ತಿಯಿಂದ ತಪಸ್ಸು ಮಾಡಿದ ಸ್ಥಳವಾಗಿದೆ. ಬಂಡೆಯ ಮೇಲೆ ಒಂದು ಸಣ್ಣ ಪ್ರಕ್ಷೇಪಣವು ಅವಳ ಪಾದದ ಮುದ್ರೆ ಎಂದು ನಂಬಲಾಗಿದೆ.
ಸಾಮಾನ್ಯವಾಗಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರದ ಕೊನೆಯಲ್ಲಿ ಆಧ್ಯಾತ್ಮಿಕ ಪ್ರಯಾಣವನ್ನು ಕೈಗೊಳ್ಳುತ್ತಾರೆ. 2019 ರಲ್ಲಿ ಅವರು ಕೇದಾರನಾಥಕ್ಕೆ #Kedaranatha ಮತ್ತು 2014 ರಲ್ಲಿ ಅವರು ಶಿವಾಜಿಯ ಪ್ರತಾಪಗಢಕ್ಕೆ ಭೇಟಿ ನೀಡಿದ್ದರು.
ಏಪ್ರಿಲ್ 19 ರಿಂದ ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಜೂನ್ 4 ರಂದು ಫಲಿತಾಂಶ ಹೊರಬೀಳಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post