ಕಲ್ಪ ಮೀಡಿಯಾ ಹೌಸ್ | ರಾಯಚೂರು |
ಕಾನೂನು ಬಾಹಿರವಾಗಿ ಹೆಣ್ಣು ಮಗುವೊಂದನ್ನು ದತ್ತು ತೆಗೆದುಕೊಂಡು ಪೊಲೀಸರಿಂದ ಬಂಧನಕ್ಕೊಳಗಾಗಿರುವ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ #SonuSrinivasGowda ಅವರನ್ನು ಬಾಲಕಿಯ ಗ್ರಾಮಕ್ಕೆ ಸ್ಥಳ ಮಹಜರು ಮಾಡಲು ಕರೆತರಲಾಗಿದ್ದು, ಗ್ರಾಮಸ್ಥರು ಆಕೆಗೆ ಛೀಮಾರಿ ಹಾಕಿದ್ದಾರೆ.
ರಾಯಚೂರಿನ #Raichur ಮಸ್ಕಿ ತಾಲೂಕಿನ ಕಾಚಾಪುರದಲ್ಲಿರುವ ಬಾಲಕಿಯ ಮನೆಗೆ ಸ್ಥಳ ಮಹಜರಿಗಾಗಿ ಸೋನು ಗೌಡಳನ್ನು ಪೊಲೀಸರು ಇಂದು ಕರೆತಂದರು.

ಸೋನು ಶ್ರೀನಿವಾಸ್ ಗೌಡ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು ಕಾರಿಗೆ ಮುತ್ತಿಗೆ ಹಾಕಿದರು. ತಾನು ಮಾಡಿದ ಕೃತ್ಯದ ಬಗ್ಗೆ ಮಾತನಾಡಬೇಕು ಎಂದು ಆಗ್ರಹಿಸಿದರು.

ಸೋನು ಅಲ್ಲಿಂದ ಹೊರಟ ನಂತರವೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಗುವನ್ನು ಅಕ್ರಮವಾಗಿ ಕರೆದುಕೊಂಡು ಹೋಗಿ, ತನ್ನ ರೀಲ್ಸ್’ಗಾಗಿ ಬಳಸಿಕೊಂಡ ಆಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಿಡಿ ಕಾರಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post