ಇಸ್ಲಾಮಾಬಾದ್: ಪೆಶಾವರದಲ್ಲಿ ನಡೆಯುತ್ತಿದ್ದ ಚುನಾವಣಾ ಬಹಿರಂಗ ಸಭೆಯಲ್ಲಿ ಆತ್ಮಹತ್ಯಾ ದಾಳಿ ನಡೆದಿದ್ದು, ಓರ್ವ ರಾಜಕೀಯ ಮುಖಂಡ ಸೇರಿದಂತೆ 14 ಮಂದಿ ಬಲಿಯಾಗಿರುವ ಘಟನೆ ನಡೆದಿದೆ.
ಸ್ಥಳೀಯ ಮಾಧ್ಯಮಗಳ ವರದಿಯಂತೆ ಎಎನ್‌ಪಿ ಅಭ್ಯರ್ಥಿ ಹರೋನ್ ಬಿಲೋರ್ ಮೃತರಾಗಿದ್ದು, ಘಟನೆಯಲ್ಲಿ ಬಹಳಷ್ಟು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಅಭ್ಯರ್ಥಿ ಬಿಲೋರ್ ವೇದಿಕೆಗೆ ಬರುವ ವೇಳೆ ಸ್ಫೋಟ ಸಂಭವಿಸಿದ್ದು, ಇವರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.
ಪಾಕ್‌ನಲ್ಲಿ ಚುನಾವಣೆ ನಡೆಯುತ್ತಿದ್ದು, ಇದನ್ನು ಗುರಿಯಾಗಿಸಿಕೊಂಡು ಬಹಳಷ್ಟು ದಾಳಿಗಳು ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದ್ದು, ಎಲ್ಲೆಡೆ ಬಿಗಿ ಭದ್ರತೆ ಒದಗಿಸಲಾಗಿದೆ.
Discussion about this post