ಕಲ್ಪ ಮೀಡಿಯಾ ಹೌಸ್ | ರಾಯಚೂರು |
ಈವರೆಗೂ ಹಗರಣ ಮಾಡದೇ ಸ್ವಚ್ಛವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುವ ಸಿದ್ದರಾಮಯ್ಯನವರೇ, ರಾಬರ್ಟ್ ವಾದ್ರಾ ಮಾಡಿದ ಹಗರಣಗಳ ಪಟ್ಟಿ ನಿಮ್ಮ ಬಳಿ ಇದೆಯಾ? ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಚಾಟಿ ಬೀಸಿದ್ದಾರೆ.
ರಾಯಚೂರು ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ರಾಬರ್ಟ್ ವಾದ್ರಾ ಮಾಡಿದ್ದ ಹಗರಣದ ಪಟ್ಟಿ ಇದೆಯಾ..?, ನ್ಯಾಷನಲ್ ಹೆರಾಲ್ಡ್ ಹಗರಣ ಗೊತ್ತಿಲ್ವೇ?, ಈವರೆಗೆ ಹಗರಣ ಮಾಡದ ಮೋದಿ ಬಗ್ಗೆ ಮಾತನಾಡ್ತೀರಾ?, 25 ಲಕ್ಷ ಹುಬ್ಲೋಟ್ ವಾಚ್ ಯಾರೂ ಕೊಟ್ಟಿದ್ರು? ಗೊತ್ತಿಲ್ವಾ. ಕೋಟ್ಯಂತರ ರೂ.ಬೆಲೆ ಬಾಳುವ ಜಮೀನನ್ನು ರಿಯಲ್ ಎಸ್ಟೇಟ್ ಅವರಿಗೆ ಮಾರಾಟ ಮಾಡಿದ್ದೀರಿ ಎಂದು ಕಿಡಿಕಾರಿದರು.

ಬಚ್ಚಾ ರಾಹುಲ್ ಗಾಂಧಿ ಮೋದಿ ಬಗ್ಗೆ ಮಾತನಾಡುತ್ತಾನೆ. ನಿಮ್ಮ ಎಲ್ಲ ಹಗರಣಗಳನ್ನು ಬಯಲಿಗೆಳೆಯುತ್ತೇವೆ. ಮುಂಬರುವ ವಿಧಾನ ಮಂಡಲದಲ್ಲಿ ನಿಮ್ಮ ಹಗರಣಗಳನ್ನು ಬಯಲಿಗೆಳೆಯುತ್ತೇವೆ. ನಿಮ್ಮ ಹಗರಣಗಳನ್ನ ತನಿಖೆ ಮಾಡಿಸಿ, ನಿಮ್ಮನ್ನ ಎಲ್ಲಿ ನಿಲ್ಲಿಸಬೇಕು ಅಲ್ಲಿ ನಿಲ್ಲಿಸುತ್ತೇವೆ ಎಂದು ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post