ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತಮ್ಮ ಹಣೆಗೆ ಹಿರಿಯ ನಾಗರಿಕರೊಬ್ಬರು ಕುಂಕುಮ #Kunkum ಹಚ್ಚಲು ಬಂದ ವೇಳೆ ಅದಕ್ಕೆ ನಿರಾಕರಿಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ್ #RAshok ವಿರುದ್ಧ ಕಾಂಗ್ರೆಸ್ ಹಿಗ್ಗಾಮುಗ್ಗಾ ಟೀಕಾ ಪ್ರಹಾರ ನಡೆಸಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೆಪೇಟ್’ನಲ್ಲಿರುವ ಬಿಜೆಪಿ #BJP ಕಚೇರಿಗೆ ಆರ್. ಅಶೋಕ್ ನಿನ್ನೆ ಭೇಟಿ ನೀಡಿದ್ದರು. ಈ ವೇಳೆ ಹಿರಿಯರೊಬ್ಬರು ಅಶೋಕ್ ಅವರಿಗೆ ಕುಂಕುಮ ಹಚ್ಚಲು ಮುಂದಾಗಿದ್ದಾರೆ.
ಆದರೆ, ಹಚ್ಚದಂತೆ ಅಶೋಕ್ ತಡೆದು ಹಿಂದೆ ಸರಿದಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಂಗ್ರೆಸ್ ವಾಗ್ದಾಳಿ
ಇನ್ನು, ಈ ಕುರಿತಂತೆ ರಾಜ್ಯ ಕಾಂಗ್ರೆಸ್ ಅಧಿಕೃತ ಎಕ್ಸ್ ಮಾಡಿದ್ದು ಟೀಕೆ ವ್ಯಕ್ತಪಡಿಸಿದೆ.
ವಿಪಕ್ಷ ನಾಯಕ ಅಶೋಕ್ ಗೆ ಕುಂಕುಮ ಎಂದರೆ ಅಲರ್ಜಿಯೇ, ಅಸಹ್ಯವೇ? ಎಂದು ಪ್ರಶ್ನಿಸಿದೆ. ಕುಂಕುಮ ಹಚ್ಚಲು ಬಂದರೆ ಅದನ್ನು ನಿರಾಕರಿಸುವ ಅಶೋಕ್ ಅವರ ಮೂಲಕ ಬಿಜೆಪಿಯವರ ಬೂಟಾಟಿಕೆಯ ಹುಸಿ ಧಾರ್ಮಿಕತೆ ನಾಟಕ ಬಯಲಾಗಿದೆ ಎಂದು ಟೀಕಿಸಿದೆ.
ಕೇಸರಿ ಶಾಲು, ಕುಂಕುಮ ಮುಂತಾದವುಗಳು ಬಿಜೆಪಿಗರ ಯುವ ಸಮುದಾಯವನ್ನು ದಿಕ್ಕು ತಪ್ಪಿಸುವ ಟೂಲ್ ಕಿಟ್ ಹೊರತು ಬಿಜೆಪಿಗರ ಅಸಲಿ ಆಚರಣೆಯಲ್ಲ. ಬೊಮ್ಮಾಯಿಯವರು ಕುಂಕುಮಾವನ್ನು ಉಜ್ಜಿ ಉಜ್ಜಿ ಅಳಿಸಿಕೊಂಡರೆ, ಅಶೋಕ್ ಅವರು ಹಚ್ಚಿಕೊಳ್ಳಲು ನಿರಾಕರಿಸುತ್ತಾರೆ. ನಿಮ್ಮ ನಾಯಕರಿಗೆ ಕುಂಕುಮಕ್ಕಿಿಂತ ಮೇಕಪ್ ಮುಖ್ಯವೇ ಎಂದು ಪ್ರಶ್ನಿಸಿದೆ.
ಈ ಘಟನೆಯಿಂದಾಗಿ ಬಿಜೆಪಿಗೆ ಮುಜುಗರ ಉಂಟಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post