ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ನಿರಂಜನ್ ಕರ್ಕೇರ |
ಬದುಕಿನಲ್ಲಿ ಕನಸ್ಸುಗಳನ್ನು ಬಾನೆಂತರದಲ್ಲಿ ಕಟ್ಟಿಕೊಂಡು ಪಯಣಿಸಬೇಕು. ಆ ಎತ್ತರಕ್ಕೆ ತಲುಪಲು ಆಗದ್ದಿದ್ದರೂ ಅದರ ಹತ್ತಿರಕ್ಕೆ ಒಂದಲ್ಲ ಒಂದು ದಿನ ಖಂಡಿತವಾಗಿಯೂ ತಲುಪಿಯೇ ತಲುಪುತ್ತೇವೆ. ಸಾಧನೆಯ ಹಾದಿಯಲ್ಲೂ ನಾವು ಇಂತಹ ಕಠಿಣ ಕನಸ್ಸನ್ನು ಹೊತ್ತು ಸಾಗಿದರೆ ಸಾಧನೆಗೆ ಪ್ರತಿಫಲ ಸಿಕ್ಕೆ ಸಿಗುತ್ತೆ ಎಂಬ ದಿಟ್ಟ ಹೆಜ್ಜೆ ಇಟ್ಟು ಸಾಧನೆಯ ಪಯಣಕ್ಕೆ ಪಟ್ಟುಹಿಡಿದು ಸಾಗಿದರೆ ಮುಂದೊಂದು ದಿನ ಎಲ್ಲದರಲ್ಲೂ ಯಶಸ್ಸು ಕಂಡಿತ ಇದನ್ನು ನನಸಾಗಿಸಿದ್ದಾರೆ ನಮ್ಮ ತುಳುನಾಡಿನ ಹೆಮ್ಮೆ ಪ್ರಕಾಶ್ ಶೆಟ್ಟಿ ಕೆಂಜಾರ್.
ಹೌದು… ಇತ್ತೀಚೆಗೆ ಸಾಲಿಗ್ರಾಮದಲ್ಲಿ ನಡೆದ 13, 14 ಮತ್ತು 15-09-2024 ರೊ ಫಿಟ್ನೆಸ್ ಮತ್ತು ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಅಸೋಶಿಯೇಶನ್ ಸಹಯೋಗದೊಂದಿಗೆ ಜರಗಿದ ರಾಜ್ಯ ಮಾಸ್ಟರ್-ಎಂ2 ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ 93 ಕೆಜಿ ದೇಹತೂಕ ವಿಭಾಗದಲ್ಲಿ ಶಿವೆಶಿವಾನಿ ತುಲುವೆ ಪ್ರಕಾಶ್ ಶೆಟ್ಟಿ ಗಂಡೊಟ್ಟು ಕೆಂಜಾರ್ ಕಂಚಿನ ಪದಕ ಜಯಿಸಿದರು.
ತಂದೆ ಸದಾಶಿವ ಚೌಟರ ಮನೆ – ತಾಯಿ ಭವಾನಿ ಶೆಟ್ಟಿ ಗಂಡೊಟ್ಟು ಕೆಂಜಾರ್ ದಂಪತಿ ಪುತ್ರರಾದ ಇವರ ಈ ಸಾಧನೆಯ ಹಿಂದೆ ಪತ್ನಿ ರೇಣುಕಾ ಪಿ. ಶೆಟ್ಟಿ ಹಾಗೂ ಮುದ್ದಿನ ಮಗ ಲವಿಶ್ ಪಿ. ಶೆಟ್ಟಿ ಅವರ ಸಹಕಾರ ದೊಡ್ಡದಿದೆ.
ಕುಡ್ಲ (ಮಂಗಳೂರು) ವಾಣಿಜ್ಯ ತೆರಿಗೆ ಇಲಾಖೆಯ ಉದ್ಯೋಗಿಯಾಗಿರುವ ಪ್ರಕಾಶ್ ಶೆಟ್ಟಿ, ಮಂಗಳೂರು ಬಾಲಾಂಜನೇಯ ಜಿಮ್’ನಲ್ಲಿ ಮಾಜಿ ಅಂತಾರಾಷ್ಟ್ರೀಯ ಪವರ್ ಲಿಪ್ಟರ್ ದೇವದಾಸ್ ಕೂಳೂರು ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
ದೈಹಿಕ ದಾಢ್ಯತೆಯಲ್ಲಿ ಸಾಧನೆ ಮಾಡಿದ್ದರೂ, ಪ್ರಕಾಶ್ ಶೆಟ್ಟಿ ಕೆಂಜಾರ್ ಅವರು ತುಂಬಾ ಮೃದು ಸ್ವಭಾವದ ವ್ಯಕ್ತಿ. ತುಳುನಾಡಿನ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಸಿಕೊಂಡು ಮಾರ್ಗದರ್ಶಕರಾಗಿ, ಕಲಾ ಪ್ರತಿಭೆಗಳಿಗೆ ಪ್ರೋತ್ಸಾಹಿಸುತ್ತಾ ತನ್ನ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಭೆಗಳನ್ನು ಮುಂದೆಳೆಗೆ ತಂದಿದ್ದಾರೆ. ಕ್ರೀಡಾ ಜಗತ್ತಿನಲ್ಲಿಸಾಧನೆಯೆಂಬ ಮೆಟ್ಟಿಲು ಹತ್ತುತ್ತಿರುವ ಶಿವೆಶಿವಾನಿ ತುಲುವೆ ಪ್ರಕಾಶ್ ಶೆಟ್ಟಿ.
ತುಳುವನ್ನು ನಿರರ್ಗಳವಾಗಿ ಮಾತನಾಡುತ್ತಾ ಮುಖದಲ್ಲಾಗುವ ಹಾವಭಾವ, ಸರಳತೆಯಿಂದ ಕೂಡಿದ್ದು ಅಪ್ಪಟ ತುಳುನಾಡ ಮಣ್ಣಿನ ಮಗನಾಗಿ ಸುಂದರವಾದ ಪೈಜಾಮ ಪಂಚೆ ಶಾಲು ಧರಿಸಿ ಹಣೆಗೊಂದು ತಿಲಕದ ಶೋಭೆ. ಪ್ರತಿಭೆ ಕೀರ್ತಿ ಸಜ್ಜನಿಕೆ ಹೃದಯ ಶ್ರೀಮಂತಿಕೆಗೆ ಏನು ಕೊರತೆಯಿಲ್ಲ ಸರಳ, ಸಜ್ಜನ ಸಾಮಾಜಿಕ ಧಾರ್ಮಿಕ ವ್ಯಕ್ತಿ.
ತುಳುನಾಡ ಸಂಸ್ಕೃತಿ, ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡಿರುವ ಇವರು ಇನ್ನಷ್ಟು ಎತ್ತರಕ್ಕೆ ಏರಲಿ ಎಂಬ ಆಶಾಭಾವನೆ ನಮ್ಮದು.
ಸಾಧ್ಯವಿಲ್ಲ ಎಂದುಕೊಂಡರೆ ಏನನ್ನೂ ಸಾಧಿಸಲಾಗದು, ಪ್ರಯತ್ನಿಸುವುದರಿಂದ ನಷ್ಟವೇನಿದೆ. ಗೆದ್ದರೆ ಸಂತೋಷವಾಗುತ್ತದೆ, ಸೋತರೆ ಅನುಭವ ಸಿಗುತ್ತದೆ ಇವರು ಸ್ವಯಂ ಪ್ರೇರಿತವಾಗಿ ಕ್ರೀಡಾ ಜಗತ್ತಿನಲ್ಲಿ ಪವರ್ ಲಿಫ್ಟಿಂಗ್ ವಿಭಾಗದಲ್ಲಿ ಸಂಚಲನ ಮೂಡಿಸುತ್ತಿರುವ ತುಳುನಾಡಿನ ಹೆಮ್ಮೆ ಇವರು.
ಸಾಧಕರು ತಮ್ಮ ಗುರಿಯನ್ನು ತಲುಪಿದ ನಂತರ ಅವರು ಸಾಧಕರಾಗಿ ರೂಪುಗೊಳ್ಳುತ್ತಾರೆ. ಇವರು ಮಾಡಿದ ಸಾಧನೆ ಅಮೋಘ ಇವರ ಈ ಸಾಧನೆ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲೂ ಪಸರಿಸಲಿ. ಇವರು ಕಂಡ ಕನಸೆಲ್ಲ ನನಸಾಗಲಿ ಆ ದೈವ ದೇವರ ಆಶೀರ್ವಾದ ಮೇಲೆ ಸದಾ ಇರಲಿ. ಇವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post