ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವಿಜಯಪೂರ: ಲವ್ಲಿ ಇದೇ ಹೆಸರಿನಡಿ ಈಗ ಕನ್ನಡದಲ್ಲೊಂದು ಟೇಲಿ ಫೀಲ್ಮ್ ನಿರ್ಮಾಣವಾಗುತ್ತಿದ್ದೆ. ಇತ್ತಿಚೆಗೆ ತುಂಬಾ ಹೊಸಬರ ಚಿತ್ರಗಳು ಬರುತ್ತಿದ್ದಾವೆ. ಅದೇ ತರ ಮೊನ್ನೆ ಯುಗಾದಿ ಹಬ್ಬದಂದು ಲವ್ಲಿ ಚಿತ್ರದ ಪೊಸ್ಟರ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ನಾಲ್ಕು ಗಂಟೆಯಲ್ಲಿ 15 ಹದಿನೈದು ಸಾವಿರ ಜನ ವೀಕ್ಷಣೆ ಮಾಡಿ ಲೈಕ್ ಮಾಡಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಶಿವಗುರು ಫೀಲಂಸ್ ಎಂಟ್ರಟೈನ್ಮೆಂಟ್ ಸಂಸ್ಥೆ ಅಡಿಯಲ್ಲಿ, ಶಿವಲಿಂಗಯ್ಯ ಪುರಾಣಿಕ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಮ್ಮ ಉತ್ತರ ಕರ್ನಾಟಕದ ಮತ್ತೊಂದು ಪ್ರತಿಭೆಯಾಗಿರುವ ಪ್ರಸನ್ನ ಪುರಾಣಿಕ ನಟಿಸಿ ನಿರ್ದೇಶನ ಮಾಡುತ್ತಿರುವ ಮೊದಲ ಟೆಲಿಫಿಲ್ಮ್ಂ.
ಈ ಹಿಂದೆ ಗುಡ್ ಚಾಯ್ಸ್ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದ ಪ್ರಸನ್ನ ಪುರಾಣಿಕ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅವರೆ ಕಥೆ, ಚಿತ್ರಕಥೆ, ಸಂಭಾಷಣೆಯ ನೊಗ ಹೊತ್ತಿದ್ದಾರೆ.
ಇನ್ನೂ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಪ್ರಸನ್ನ ಪುರಾಣಿಕ ಲವ್ಲಿ ಚಿತ್ರ ಎರಡು ಹಂತದ ಚಿತ್ರಿಕರಣ ಮುಗಿಸಿದ್ದೇವೆ. ಮೊದಲನೆಯ ಹಂತದಲ್ಲಿ ಹುಬ್ಬಳ್ಳಿ ಮತ್ತು ಸುತ್ತಮುತ್ತ ನಾಲ್ಕು ದಿನ ಚಿತ್ರೀಕರಣ ಮಾಡಿದ್ದು, ಎರಡನೆಯ ಹಂತದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಮೂರು ದಿನ ಚಿತ್ರೀಕರಣ ಮುಗಿಸಿದ್ದೇವೆ. ಇನ್ನೂ ಮೂರನೆಯ ಹಂತದ ಚಿತ್ರೀಕರಣ ಗೋವಾದಲ್ಲಿ ಮಾಡಲು ಎಲ್ಲಾ ತಂತ್ರಜ್ಞಾನ ಮತ್ತು ಚಿತ್ರತಂಡದವರು ಎಲ್ಲ ಸಿದ್ಧತೆಗಳಲ್ಲಿ ತಯಾರಾಗಿದ್ದೇವೆ. ಆದರೆ ಸದ್ಯ ಕೊರೋನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಚಿತ್ರೀಕರಣ ಸದ್ಯಕ್ಕೆ ನಿಲ್ಲಿಸಿದ್ದೇವೆ ಎಂದರು.
ಮನುಷ್ಯ ಸಂಬಧಕ್ಕೆ ಪೆಟ್ಟು ಬಿದ್ದಾಗ ಅದರ ಉಳಿವಿಗಾಗಿ ಏನೆಲ್ಲಾ ಪ್ರಯತ್ನ ಮಾಡುತ್ತಾನೆ ಎಂಬುದೇ ಇದರ ತಿರುಳು. ಪ್ರೀತಿ, ಕಾಮಿಡಿ, ಥ್ರೀಲ್ಲಿಂಗ್ ಅಂಶಗಳು ಇದರಲ್ಲಿವೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಚಿತ್ರದಲ್ಲಿ ಮೂರು ವ್ಯಕ್ತಿಗಳ ಮನಃಸ್ಥಿತಿ ಬಿಚ್ಚಿಕೊಳ್ಳುತ್ತಿದೆಯಂತೆ. ಪ್ರಸನ್ನ ಪುರಾಣಿಕ್, ರೇವತಿ, ನವ್ಯ, ಉದಯಕುಮಾರ್ ಈ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಆಶಿಕ್ ಮಂಗಳೂರು ಹಾಗೂ ಸಹ ಛಾಯಾಗ್ರಾಹಕ ರಮೇಶ ಅವರ ಕ್ಯಾಮೆರಾ ಕೈಚಳಕವಿದ್ದು, ಮಾನಸ ಹೊಳ್ಳ ಮತ್ತು ಚೇತನ ನಾಯಕ ಅವರು ಸಂಗೀತ ನೀಡಿದ್ದಾರೆ. ಶಿವಾನಂದ ಸಾಲಿಮಠ ಹಿನ್ನೆಲೆ ಸಂಗೀತದ ಹೊಣೆ ಹೊತ್ತಿದ್ದು, ಪ್ರಸನ್ನ ಪುರಾಣಿಕ ಹಾಡುಗಳನ್ನು ಬರೆದಿದ್ದಾರೆ. ಅರುಣ ಎಂಡ್ರೂ ಸಂಗೀತ ಸಂಯೋಜಿಸಿದ್ದು, ಆಕಾಶ ಅವರ ಸಾಹಸವಿದೆ.
ಪ್ರಸನ್ನ ಪುರಾಣಿಕ್, ರೇವತಿ, ನವ್ಯ, ಉದಯಕುಮಾರ, ಸಚಿನ್, ಆಕಾಶ, ತಾರಾಗಣದಲ್ಲಿದ್ದಾರೆ. ಕೋ ಡೈರೆಕ್ಟರ್ ರವಿ ಪಾಟೀಲ, ಸಹ ನಿರ್ದೇಶಕ ನವೀನ, ಸಹಾಯಕ ನಿರ್ದೇಶಕ ಕಿರಣ, ಸಂಯೋಜಕ ವಿಶ್ವಪ್ರಕಾಶ ಮಲಗೊಂಡ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಈಗಾಗಲೇ ಈ ಚಿತ್ರದ ಎರಡು ಪೋಸ್ಟರ್’ಗಳು ಬಿಡುಗಡೆಗೊಂಡಿದ್ದು, ಸಾಕಷ್ಟು ಸದ್ದು ಮಾಡಿದ್ದು, ಚಿತ್ರದ ಬಗ್ಗೆ ಬಹಳಷ್ಟು ಕುತೂಹಲ ಮೂಡಿಸಿದೆ ಎಂದರೆ ತಪ್ಪಾಗಲಾರದು.
ಇಂಪಾದ ಸಂಗೀತ, ಮಧುರವಾದ ಹಿನ್ನೆಲೆ ಗಾಯನ, ಅದಕ್ಕೆ ತಕ್ಕಂತಹ ಮನೋಜ್ಞ ಅಭಿನಯ ಹಾಗೂ ವರ್ಣಮಯ ದೃಶ್ಯಗಳು, ನಟ ನಟಿಯರ ಪ್ರೀತಿಯನ್ನೂ ಅವರ ನಡುವಿನ ಆತ್ಮೀಯತೆಯ ಕ್ಷಣಗಳನ್ನು ಪದಗಳ ಮೂಲಕ ವರ್ಣಿಸಿರುವ ವಿಧಾನ ಮತ್ತು ಅದೇ ತರದಲ್ಲಿ ಕಾಮಿಡಿ ಎಲ್ಲವೂ ಒಂದು ಸುಂದರವಾದ ಕಾಣಿಕೆಯಾಗಿ ’ಲವ್ಲಿ’ ಚಿತ್ರ ಬರುತ್ತದ್ದೆ.
ಸದ್ಯದಲ್ಲಿಯೇ ಚಿತ್ರದ ಟೀಸರ್ ಬಿಡುಗಡೆಯಾಗಲಿದ್ದು, ತೆರೆಗೆ ಬರುವುದಕ್ಕೆ ರೆಡಿಯಾಗಿದೆ. ಹಾಗೆಯೇ ಈ ವರ್ಷದ ಭರವಸೆಯ ಟೆಲಿಫಿಲ್ಮ್ಂ ಗಳಲ್ಲಿ ಈ ಚಿತ್ರವನ್ನೂ ಸಹ ಸೇರಿಸಬಹುದು.
ಇನ್ನು ಲವ್ಲಿ ಚಿತ್ರದ ಎಲ್ಲಾ ಕೆಲಸಗಳು ಅಂದುಕೊಂಡತೆ ಆದರೆ ಇದೇ ವರ್ಷ ಚಿತ್ರ ಬಿಡುಗಡೆಯಾಗಲಿದೆ.
Get in Touch With Us info@kalpa.news Whatsapp: 9481252093
Discussion about this post