ಉ. ಕೊರಿಯಾ ಹೊರಜಗತ್ತಿಗೆ ಇಂದಿಗೂ ಅತಿ ಹೆಚ್ಚು ಕೌತುಕವಾಗಿ ಉಳಿಯಲು ಕಾರಣ ಮಾಧ್ಯಮದ ಮೇಲಿನ ನಿರ್ಬಂಧ. ರೇಡಿಯೋ, ಟಿವಿ ಸುದ್ದಿ ಪತ್ರಿಕೆ ಮತ್ತು ಇಂಟರ್ನೆಟ್ ಮೇಲೆ ಸರ್ಕಾರದ ಸಂಪೂರ್ಣ ಹಿಡಿತವಿದ್ದು, ನಿರ್ಬಂಧವನ್ನು ಮೀರುವುದು ಭಾರಿ ದುಸ್ಸಾಧ್ಯ. ಉತ್ತರ ಕೊರಿಯಾದ ರೇಡಿಯೋ ಮತ್ತು ಟಿವಿಗಳು ಕೇವಲ ಉತ್ತರ ಕೊರಿಯಾ ಸರ್ಕಾರದ ತರಂಗಾಂತರ ಸ್ವೀಕರಿಸಲು ಸಾಧ್ಯವಾಗುವಂತೆ ಸಿದ್ಧಪಡಿಸಿ ಸೀಲ್ (ಮುದ್ರೆ) ಮಾಡಲಾಗಿರುತ್ತದೆ. ಈ ಮುದ್ರೆ ಒಡೆದು ಉತ್ತರ ಕೊರಿಯಾದ ಹೊರಗಿನ ತರಂಗಾಂತರ ಸ್ವೀಕರಿಸಲು ಪ್ರಯತ್ನಿಸುವುದು ಭಾರೀ ದೊಡ್ಡ ಶಿಕ್ಷೆಗೆ ಗುರಿಯಾಗುತ್ತದೆ. ಉತ್ತರ ಕೊರಿಯಾವು ತನ್ನ ಟಿವಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು Phase Alternating Line (PAL) ಸಿಸ್ಟಮ್ ಅನ್ನು ಮತ್ತು ದಕ್ಷಿಣ ಕೊರಿಯಾವು National Television system commitee (NTSC) ಸಿಸ್ಟಮ್‌ವನ್ನು ಉಪ ಯೋಗಿಸುವುದರಿಂದ ಉಭಯ ದೇಶಗಳ ಗಡಿಯಾಚೆ ಪರಸ್ಪರ ದೇಶಗಳ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಇದರ ಹೊರತಾಗಿ Short wave ಮೂಲಕ ದೇಶದ ಹೊರಗಿನ ಆಕಾಶವಾಣಿ ಕಾರ್ಯಕ್ರಮಗಳನ್ನು ಆಲಿಸಲಿಕ್ಕೆ ತಾಂತ್ರಿಕವಾಗಿ ಸಾಧ್ಯವಿದ್ದರೂ Short wave ರೇಡಿಯೋ ಇಟ್ಟುಕೊಳ್ಳುವುದು ಉತ್ತರ ಕೊರಿಯಾದ ಕಾನೂನಿಗೆ ವಿರುದ್ಧ ಆದರೂ ಸಹ ಹಲವು ಏಜೆಂಟರ ಮೂಲಕ Short wave ರೇಡಿಯೋ ಖರೀದಿಸಬಹುದು.
ನಮ್ಮ ದೇಶದಲ್ಲಿ ಅನಧಿಕೃತವಾಗಿ ಒಂದು ಗನ್ ಇಟ್ಟುಕೊಳ್ಳೊದು ಎಂತಾ ಅಪರಾಧವೋ ಉತ್ತರ ಕೊರಿಯಾದಲ್ಲಿ ಅನಧಿಕೃತವಾಗಿ ಒಂದು ಕಂಪ್ಯೂಟರ್ ಇಟ್ಟುಕೊಳ್ಳುವುದು ಅಷ್ಟೇ ದೊಡ್ಡ ಮಟ್ಟದ ಅಪರಾಧ. ಕಂಪ್ಯೂಟರ್ ಖರೀದಿಸುವ ಪ್ರತಿಯೊಬ್ಬ ಪ್ರಜೆಯು ಸ್ಥಳೀಯ ಆಡಳಿತದ ಅನುಮತಿ ಪಡೆದು ನಂತರ ಪೊಲೀಸ್ ಠಾಣೆಯಲ್ಲಿ ನೋಂದಣಿ ಮಾಡಿ ಸುವುದು ಕಡ್ಡಾಯ. ಯಾವುದೇ ಖಾಸಗಿ ವ್ಯಕ್ತಿ ಫ್ಯಾಕ್ಸ್ ಮಷೀನ್‌ನ್ನು ಖರೀ ದಿಸಲು ಸಾಧ್ಯವಿಲ್ಲ. ದಕ್ಷಿಣ ಕೊರಿಯಾದ ನಾಟಕಗಳನ್ನು ವೀಕ್ಷಿಸುವುದು ಕಾನೂನುಬಾಹಿರ. ದಕ್ಷಿಣ ಕೊರಿಯಾದ ನಾಟಕದ ಪೈರೇಟೆಡ್ ಡಿವಿಡಿಗಳು ಪೊಲೀಸ್ ದಾಳಿಯಲ್ಲಿ ಆಗಾಗ್ಗೆ ಸಿಗುತ್ತಲೇ ಇರುತ್ತವೆ. ಹೀಗೆ ಪೊಲೀಸ್ ದಾಳಿಯಲ್ಲಿ ಬಂಧಿಸಲ್ಪಡುವ ನಾಗರಿಕರನ್ನು ಹಲವು ವರ್ಷಗಳವರೆಗೆ ಜೈಲಿಗೆ (Lobour coups) ತಳ್ಳಲಾಗುತ್ತದೆ.
ಮುಂದುವರೆಯುವುದು…
Discussion about this post