ನವದೆಹಲಿ: ಸುಪ್ರೀಂ ಕೋರ್ಟ್ ಮುಂದಿನ ಮುಖ್ಯ ನ್ಯಾಯಾಧೀಶರಾಗಿ ಹಿರಿಯ ನ್ಯಾಯಾಧೀಶ ಶರದ್ ಅರವಿಂದ್ ಬೊಬ್ಡೆ ಅವರನ್ನು ನೇಮಕ ಪ್ರಸ್ತಾವನಗೆ ಅಂಕಿತ ಹಾಕುವ ಮೂಲಕ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನೇಮಕ ಮಾಡಿದ್ದಾರೆ.
ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಅರವಿಂದ್ ಬೊಬ್ಡೆಯವರನ್ನು ನೇಮಕ ಮಾಡುವಂತೆ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಸರ್ಕಾರ ಅವರ ಹೆಸರನ್ನು ಅಂತಿಮಗೊಳಿಸಿ ಸಹಿಗೆ ರಾಷ್ಟ್ರಪತಿ ಬಳಿ ಕಳುಹಿಸಿತ್ತು. ಇಂದು ನೇಮಕಾತಿ ಆದೇಶಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹಿ ಹಾಕಿದ್ದಾರೆ.
ಇನ್ನು ಈ ಕುರಿತ ಅಧಿಕೃತ ಅಧಿಸೂಚನೆ ಇನ್ನು ಹೊರಬೀಳಬೇಕಿದ್ದು, ನೂತನ ಸಿಜೆಐ ಅವರು ಇದೇ 18ರಂದು ಅಧಿಕಾರ ಸ್ವೀಕರಿಸಲಿದ್ದಾರೆ. 2021ರ ಏಪ್ರಿಲ್ 23ರಂದು ಅವರ ಅಧಿಕಾರ ಅಂತ್ಯವಾಗಲಿದೆ.
Get In Touch With Us info@kalpa.news Whatsapp: 9481252093, 94487 22200
Discussion about this post