ಕಲ್ಪ ಮೀಡಿಯಾ ಹೌಸ್
ನವದೆಹಲಿ: ಕೊರೋನಾ ಸೋಂಕು ಹಾಗೂ ಲಾಕ್ ಡೌನ್ ಸಂಕಷ್ಟದಿಂದ ಕಂಗೆಟ್ಟಿರುವ ದೇಶವಾಸಿಗಳಿಗಾಗಿ ದೀಪಾವಳಿವರೆಗೂ ಉಚಿತ ರೇಷನ್ ಕೊಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.
ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಯಾರೂ, ಎಂತಹ ಬಡವರೂ ಸಹ ಹಸಿವಿನಿಂದ ಮಲಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ಹೀಗಾಗಿ, ಕಷ್ಟದಲ್ಲಿರುವ 80 ಕೋಟಿ ಭಾರತೀಯರಿಗೆ ಮುಂಬರುವ ದೀಪಾವಳಿವರೆಗೂ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿಯಲ್ಲಿ ಉಚಿತ ರೇಷನ್ ನೀಡಲು ನಿರ್ಧರಿಸಲಾಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















