ನವದೆಹಲಿ: 1999ರಲ್ಲಿ ಇಡಿಯ ವಿಶ್ವವೇ ಬೆರಗುಗಣ್ಣಿನಿಂದ ಭಾರತದೆಡೆಗೆ ತಿರುಗಿ ನೋಡುವಂತೆ ಮಾಡಿದ ಕಾರ್ಗಿಲ್ ಯುದ್ಧದ ವಿಜಯೋತ್ಸವವನ್ನು ಇಂದು ದೇಶದೆಲ್ಲೆಡೆ ಆಚರಿಸುತ್ತಾ, ವೀರಸ್ವರ್ಗ ಸೇರಿದ ಯೋಧರಿಗೆ ಗೌರವ ನಮನ ಸಲ್ಲಿಸಲಾಗುತ್ತಿದೆ.
ಕಾರ್ಗಿಲ್ ಯುದ್ಧದ ವೇಳೆ ಕಾರ್ಗಿಲ್’ಗೆ ಭೇಟಿ ನೀಡಿದ್ದ ಇಂದಿನ ಪ್ರಧಾನಿ ನರೇಂದ್ರ ಮೋದಿ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, 1999 ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಸಮಯದಲ್ಲಿ, ಕಾರ್ಗಿಲ್‌ಗೆ ಹೋಗಿ ನಮ್ಮ ಕೆಚ್ಚೆದೆಯ ಸೈನಿಕರೊಂದಿಗೆ ಒಗ್ಗಟ್ಟನ್ನು ತೋರಿಸಲು ನನಗೆ ಅವಕಾಶ ಸಿಕ್ಕಿತು. ಹಿಮಾಚಲ ಪ್ರದೇಶದ ಜಮ್ಮು ಕಾಶ್ಮೀರದಲ್ಲಿ ನನ್ನ ಪಕ್ಷಕ್ಕಾಗಿ ನಾನು ಕೆಲಸ ಮಾಡುತ್ತಿದ್ದ ಸಮಯ ಇದು. ಕಾರ್ಗಿಲ್ ಭೇಟಿ ಮತ್ತು ಸೈನಿಕರೊಂದಿಗಿನ ಸಂವಹನಗಳು ಮರೆಯಲಾಗದವು ಎಂದು ನೆನಪುಗಳನ್ನು ಹಂಚಿಕೊಂಡಿದ್ದಾರೆ.
Discussion about this post