ಮಂಡ್ಯ: ದೇಶದ ಪ್ರಧಾನಿಯಾಗಿ ಇನ್ನೂ 5 ವರ್ಷವಾಗಿಲ್ಲ. ಆದರೆ, ನರೇಂದ್ರ ಮೋದಿ ಅವರು ದುರಹಂಕಾರ ಮಿತಿ ಮೀರಿದೆ ಎಂದು ಎಚ್.ಡಿ. ದೇವೇಗೌಡ ಕಿಡಿ ಕಾರಿದ್ದಾರೆ.
ಮಳವಳ್ಳಿಯಲ್ಲಿ ಮಾತನಾಡಿದ ಅವರು, ಅಧಿಕಾರ ಪಡೆದ ಅಹಂನಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆ ಎನ್ನುತ್ತಾರೆ ಮೋದಿ. ಆದರೆ, ನಾನು ಕೂಡ ಕಾಂಗ್ರೆಸ್’ನಲ್ಲೇ ಇದ್ದವನು ನಿಜಲಿಂಗಪ್ಪ ಅವರು ತಮಗೆ ಟಿಕೆಟ್ ಕೊಡದಿದ್ದಕ್ಕೆ ಅಲ್ಲಿಂದ ಹೊರಬಂದೆ ಎಂದರು.
ಸ್ವಾತಂತ್ರ್ಯ ತಂದು ಕೊಟ್ಟ ಕಾಂಗ್ರೆಸ್ ಅನ್ನು ಸಂಪೂರ್ಣ ನಾಶ ಮಾಡುತ್ತೇನೆ ಎಂಬ ದುರಹಂಕಾರದ ಮಾತುಗಳನ್ನು ಕೇಳಿದ್ದೇನೆ. ಸಂಸತ್’ನಲ್ಲಿ ನನಗೆ ಅವಕಾಶ ಕೊಟ್ಟಿರಲಿಲ್ಲ. ಆಗ ಸ್ಪೀಕರ್ ಬಳಿ ಹೋಗಿ ಒಂದು ಅವಕಾಶ ಕೊಡಿ ಮತ್ತೆ ನಾನು ಸಂಸತ್ಗೆ ಬರುತ್ತೇನೋ ಇಲ್ಲವೋ ಗೊತ್ತಿಲ್ಲ ಎಂದಿದ್ದೆ. ಅವತ್ತು ಹಾಗೇ ಹೇಳಿದ್ದವನು ಇವತ್ತು ಸಿದ್ದರಾಮಯ್ಯ ಜತೆಗೂಡಿ ಬರುವುದಕ್ಕೆ ಮೋದಿಯ ದುರಹಂಕಾರವೇ ಕಾರಣ ಎಂದರು.
Discussion about this post