ಬಾರಾಮುಲ್ಲಾ: ಪುಲ್ವಾಮಾ ದಾಳಿಯ ರೂವಾರಿಯಾಗಿದ್ದ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ್ದ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸುವ ಮೂಲಕ ಸೇನೆ ತನ್ನ ಕಾರ್ಯಾಚರಣೆಯನ್ನು ಮುಂದುವರೆಸಿದೆ.
ಸೋಪುರದಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಮುಂದುವರೆದಿದ್ದು ಇಬ್ಬರು ಉಗ್ರರನ್ನು ಸೇನೆ ಎನ್’ಕೌಂಟರ್ ನಡೆಸಿ ಹೊಸಕಿ ಹಾಕಿದ್ದು, ಸ್ಥಳದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದೆ.
ಈ ಕುರಿತಂತೆ ದಕ್ಷಿಣ ಕಾಶ್ಮೀರದ ಡಿಐಜಿ ಅತುಲ್ ಕುಮಾರ್ ಗೋಯಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇಬ್ಬರು ಉಗ್ರರನ್ನು ನಮ್ಮ ಸೇನಾ ಪಡೆಗಳು ಎನ್’ಕೌಂಟರ್ ಮಾಡಿವೆ. ಉಗ್ರರ ಗುರುತು ಮಾತ್ರ ಈವರೆಗೂ ಪತ್ತೆಯಾಗಿಲ್ಲ. ತನಿಖೆ ಆರಂಭಿಸಿದ್ದೆವೆ ಎಂದಿದ್ದಾರೆ.
ಫೆ. 14ರಂದು ಪುಲ್ವಾಮಾದಲ್ಲಿ ಜೈಷ್ ಸಂಘಟನೆಯ ಆತ್ಮಾಹುತಿ ಬಾಂಬರ್ ನಡೆಸಿದ್ದ ಉಗ್ರ ದಾಳಿಯಲ್ಲಿ ನಲವತ್ತಕ್ಕೆ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಈ ಹಿನ್ನೆಲೆಯಲ್ಲಿ ಕೆರಳಿರುವ ಸೇನೆ ಉಗ್ರರ ವಿರುದ್ಧ ತನ್ನ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ.
Discussion about this post