ನವದೆಹಲಿ: ಜಮ್ಮುವಿನ ಪುಲ್ವಾಮಾದಲ್ಲಿ ಪಾಕ್ ಉಗ್ರರು ನಡೆಸಿದ ಭೀಕರ ಆತ್ಮಾಹುತಿ ದಾಳಿಯ ತನಿಖೆಯನ್ನು ರಾಷ್ಟಿಯ ತನಿಖಾ ದಳ(ಎನ್’ಐಎ) ಅಧಿಕೃತವಾಗಿ ಇಂದು ಕೈಗೆತ್ತಿಕೊಂಡಿದೆ.
ಪ್ರಕರಣದ ಕುರಿತಂತೆ ಕೇಂದ್ರ ಗೃಹ ಸಚಿವಾಲಯದಿಂದ ತನಿಖೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಎನ್’ಐಎ, ಎಫ್’ಐಆರ್ ದಾಖಲಿಸಿ ಅಧಿಕೃತವಾಗಿ ತನಿಖೆಯನ್ನು ಆರಂಭಿಸಿದೆ.
ತನಿಖೆ ನಡೆಸುವಂತೆ ಎನ್’ಐಎಗೆ ನಿನ್ನೆ ರಾತ್ರಿ ಕೇಂದ್ರ ಗೃಹ ಸಚಿವಾಲಯ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಈ ದಳದ ತನಿಖೆ ಆರಂಭವಾಗಿದೆ.
ಕಳೆದ ಗುರುವಾರ ಪುಲ್ವಾಮಾದಲ್ಲಿ ಸಂಚರಿಸುತ್ತಿದ್ದ ಸಿಆರ್’ಪಿಎಫ್ ಕಾನ್ವೆ ವಾಹನದ ಮೇಲೆ ದಾಳಿ ನಡೆಸಿದ್ದ ಪಾಕಿಸ್ಥಾನದ ಜೈಷ್ ಉಗ್ರರು 42 ಯೋಧರನ್ನು ಬಲಿ ಪಡೆದಿದ್ದರು. ಜೈಷ್ ಉಗ್ರ ಸಂಘಟನೆಯ ಈ ಕೃತ್ಯದ ಹಿಂದೆ ಪಾಕ್ ಕೈವಾಡವಿದೆ ಎನ್ನುವುದು ಮೇಲ್ನೊಟಕ್ಕೆ ಸಾಬೀತಾಗಿದೆ.







Discussion about this post