ಪಂಜಾಬ್: ಹೌದು… ಇದನ್ನು ನೀವು ನಂಬಲೇಬೇಕು! ಪಂಜಾಬ್’ನ ಓರ್ವ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಪಡೆದಿರುವ ಮತ ಕೇವಲ 5 ಮಾತ್ರ. ಅದಕ್ಕಿಂತಲೂ ದುರಂತವೆಂದರೆ ಆತನ ಕುಟುಂಬದಲ್ಲಿರುವ ಮತಗಳೇ 9.
ಪಂಜಾಬ್’ನ ಜಲಂಧರ್ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ನೀತು ಶಟರ್ನ್ ವಾಲಾ ಎಂಬ ಅಭ್ಯರ್ಥಿ ಚುನಾವಣೆಯಲ್ಲಿ ಐದು ಮತಗಳನ್ನು ಮಾತ್ರ ಪಡೆದಿದ್ದು, ಆತನ ಕುಟುಂಬದ ಸದಸ್ಯರೇ ಆತನಿಗೆ ಮತ ಹಾಕಿಲ್ಲ ಎಂಬುದು ಗಮನಾರ್ಹ.
ಪಂಜಾಬ್’ನ ಮಾಧ್ಯಮವೊಂದು ಮಾತನಾಡಿಸಿದ ವೇಳೆ ಕ್ಯಾಮೆರಾ ನೋಡಿದಾಕ್ಷಣ ಗಳಗಳೆನ ಅತ್ತ ಆತ ಅತ್ಯಂತ ದುಖಃತಪ್ತನಾಗಿದ್ದನು.
ಈ ವೇಳೆ ಕಣ್ಣೀರು ಹಾಕುತ್ತಲೇ ಮಾತನಾಡಿದ ವಾಲಾ, ತನ್ನ ಕುಟುಂಬಸ್ತರ ವಿರುದ್ಧ ಕಿಡಿ ಕಾರಿದ್ದು ಮಾತ್ರವಲ್ಲದೇ, ಇವಿಎಂ ಮಷೀನ್’ನನ್ನು ದುರ್ಬಳಕೆ ಮಾಡಿಕೊಂಡಿರುವುದೂ ಸಹ ತನ್ನ ಸೋಲಿಗೆ ಕಾರಣ ಎಂದಿದ್ದಾನೆ.
ಗಾಯದ ಮೇಲೆ ಬರೆ ಎಳೆದಂತೆ ‘ನಿಮ್ಮ ಕುಟುಂಬಸ್ತರೇ ನಿಮ್ಮನ್ನು ಬೆಂಬಲಿಸದೇ ಇರುವ ವೇಳೆ, ಬೇರೆಯವರು ನಿಮ್ಮನ್ನು ಬೆಂಬಲಿಸಬೇಕು ಎಂದು ಹೇಗೆ ನಿರೀಕ್ಷಿಸುತ್ತೀರಿ’ ಎಂದು ವರದಿಗಾರ ಕೇಳಿದ ಪ್ರಶ್ನೆಗೆ ವಾಲಾ ಮತ್ತಷ್ಟು ದುಖಃತಪ್ತರಾದರು.







Discussion about this post