ಜಕಾರ್ತ: ಏಷ್ಯನ್ ಗೇಮ್ಸ್ 2018ರ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ ಫೈನಲ್ಸ್‍ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿರುವ ಪಿ.ವಿ. ಸಿಂಧು ಸಾಧನೆ ಮಾಡಿದ್ದರೂ, ಚಿನ್ನದ ಪದಕ ವಂಚಿತರಾಗಿರುವುದು ನಿರಾಸೆ ಮೂಡಿಸಿದೆ.
ಇಂದು ನಡೆದ ಪಂದ್ಯದಲ್ಲಿ ಚೀನಾದ ಥೈಪಯ ತೈ ಝ ಯಿಂಗ್ ಅವರ ವಿರುದ್ಧ 13-21, 16-21ರ ನೇರ ಸೆಟ್ ಗಳಿಂದ ಸೋಲುಂಡಿರುವ ಸಿಂಧು, ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
ಮೂರು ಟೂರ್ನಿಗಳಲ್ಲಿ ಫೈನಲ್ಸ್ ಪ್ರವೇಶಿಸಿದ್ದ ಸಿಂಧು, ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗಳಿಸುವ ಭರವಸೆ ಮೂಡಿಸಿದ್ದರು. ಆದರೆ, ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿರುವುದು ಸಮಸ್ತ ಭಾರತೀಯರಿಗೆ ನಿರಾಸೆ ಮೂಡಿಸಿದೆ.
ಇನ್ನು, ಬೆಳ್ಳಿ ಪದಕ ಗಳಿಸುವ ಮೂಲಕ ಸಾಧನೆಯ ಮಾಡಿರುವ ಸಿಂಧುಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.
The formidable @Pvsindhu1 is one of India’s most talented and inspiring athletes. Her skills and perseverance are noteworthy.
She wins the prized Silver Medal in Badminton at the #AsianGames2018. Her accomplishment makes 125 crore Indians happy and proud. pic.twitter.com/kKmBxzmPXn
— Narendra Modi (@narendramodi) August 28, 2018
Discussion about this post