ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭಾನ್ಕುಳಿ ಶ್ರೀರಾಮದೇವ ಮಠದಲ್ಲಿ ತಮ್ಮ 25ನೆಯ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳಲು ಉದ್ದೇಶಿಸಿ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಸ್ವಾಮಿಗಳು ಬೆಂಗಳೂರಿನ ಗಿರಿನಗರ ಮಠದಲ್ಲೇ ಚಾರ್ತುಮಾಸ್ಯ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಶ್ರೀಗಳು ಬಾನ್ಕುಳಿಯಲ್ಲಿ ಚಾರ್ತುಮಾಸ್ಯ ಕೈಗೊಳ್ಳಲು ಈ ಮುನ್ನ ಉದ್ದೇಶಿಸಿದ್ದರು. ಆದರೆ, ಸಮಾಜದ ಹಾಗೂ ಶಿಷ್ಯ ಸಮುದಾಯದ ಪದಾಧಿಕಾರಿಗಳೊಂದಿಗೆ ಸಮ್ಮುಖ ಸರ್ವಾಧಿಕಾರಿಗಳಾದ ತಿಮ್ಮಪ್ಪಯ್ಯ ಮಡಿಯಾಲ ಹಾಗೂ ಮುಖ್ಯ ನಿರ್ವಹಣಾಧಿಕಾರಿ ಕೆ.ಜಿ. ಭಟ್ಟ ರವರು ಶ್ರೀಸಂಸ್ಥಾನದವರನ್ನು ಭೇಟಿಯಾಗಿ ಬೆಂಗಳೂರಿನಲ್ಲೇ ಕೈಗೊಳ್ಳುವಂತೆ ಕೋರಿದ್ದರು.
ಕಿಡ್ನಿ ಸ್ಟೋನ್ ಗೆ ಸಂಬಂಧಿಸಿದ ಸಣ್ಣ ಪುಟ್ಟ ಚಿಕಿತ್ಸೆಯ ಅವಶ್ಯಕತೆ, ವಿಶ್ರಾಂತಿಯ ಅಗತ್ಯ ಇರುವದರಿಂದಲೂ ಚಾತುರ್ಮಾಸ್ಯವನ್ನು ಬೆಂಗಳೂರಿನಲ್ಲಿಯೇ ಕೈಗೊಂಡು, ವಿಶ್ರಾಂತಿಯನ್ನೂ ಪಡೆಯುತ್ತಾ ಗೋಸ್ವರ್ಗದ ಕುರಿತು ಹೆಚ್ಚಿನ ಮಾರ್ಗದರ್ಶನ ನೀಡಬೇಕೆಂದು ವಿನಂತಿಸಿದರು.
ಈ ವಿನಂತಿ ಮನ್ನಿಸಿದ ಶ್ರೀಗಳು ಈ ವರ್ಷ ಸಂಕಲ್ಪಿಸಿದ ಗೋ ಸ್ವರ್ಗ ಚಾತುರ್ಮಾಸ್ಯವನ್ನು ಇದೇ ಬರುವ ಆಷಾಢ ಕೃಷ್ಣ ಚತುರ್ಥಿಯಿಂದ ಅಂದರೆ ಆ.8ರಿಂದ ಬೆಂಗಳೂರಿನ ಗಿರಿನಗರ ಮಠದಲ್ಲಿ ಕೈಗೊಳ್ಳುವದಾಗಿ ಸಮ್ಮತಿ ಸೂಚಿಸಿದ್ದಾರೆ.
















