ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯ ಚರ್ಚೆ ಹಿನ್ನೆಲೆಯಲ್ಲಿ ಸಂಸತ್‌ನಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಅತ್ಯಂತ ಸ್ವಾರಸ್ಯಕರ ಘಟನೆ ಏನೆಂದರೆ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಕ್ಕೆ ಮೋದಿ ಪ್ರತಿಕ್ರಿಯೆ ಒಂದು ನಿಷ್ಕಲ್ಮಷ ನಗು. ಆದರೆ, ಇದಕ್ಕೆ ರಾಹುಲ್ ಪ್ರತಿಕ್ರಿಯಿಸಿದ್ದು ಮೋದಿ ಕಣ್ಣು ಹೊಡೆದು, ಆಲಿಂಗನ ಮಾಡುವ ಮೂಲಕ…
ಹೌದು…ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಆರೋಪಗಳನ್ನು ಕೇಳಿ ನರ್ವಸ್ ಆಗಿದ್ದಾರೆ. ಹೀಗಾಗಿ ಅವರು ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿಲ್ಲ ಎಂದು ರಾಹುಲ್ ಟಾಂಗ್ ನೀಡಿದರು. ಇದಕ್ಕೆ ಪ್ರಧಾನಿ ಮೋದಿ ನಗುತ್ತಲೇ ಮೌನ ಉತ್ತರ ನೀಡಿದರು.
#WATCH Rahul Gandhi walked up to PM Narendra Modi in Lok Sabha and gave him a hug, earlier today #NoConfidenceMotion pic.twitter.com/fTgyjE2LTt
— ANI (@ANI) July 20, 2018
ಪ್ರಧಾನಿ ಮೋದಿ ದೇಶದ ಎರಡು ಕೋಟಿ ಜನರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಆದರೆ, ಕೇವಲ 4 ಲಕ್ಷ ಜನರಿಗೆ ಮಾತ್ರ ಉದ್ಯೋಗ ನೀಡಲಾಗಿದೆ. ಅಲ್ಲದೆ, ಜಿಎಸ್‌ಟಿಯಿಂದ ದೇಶದ ಆರ್ಥಿಕತೆ ಹಾಳಾಗಿದೆ, ಸಣ್ಣ ಉದ್ಯಮಿಗಳಿಗೆ ಹೊಡೆತ ಬಿದ್ದಿದೆ ಎಂದೂ ಸಹ ವಿರುದ್ಧ ರಾಹುಲ್ ಆರೋಪ ಮಾಡಿದರು.
ಆದರೆ, ಕೊನೆಯಲ್ಲಿ ಮೋದಿ ಅವರಿಗೆ ಕಣ್ಣು ಹೊಡೆದ ರಾಹುಲ್, ಅವರನ್ನು ಆಲಿಂಗನ ಮಾಡಿದ್ದು ಇಡಿಯ ಸಂಸತ್ ಕಲಾಪವನ್ನೇ ವಿಭಿನ್ನವಾಗಿಸಿತ್ತು.
ಕೆಲವು ತಿಂಗಳ ಹಿಂದೆ ಕಣ್ ಸನ್ನೆಯ ಹುಡುಗಿ ಪ್ರಿಯಾ ವಾರಿಯರ್ ಕಣ್ಣು ಹೊಡೆದೇ ಫೇಮಸ್ ಆಗಿದ್ದರು. ಅದೇ ರೀತಿ ಈಗ ರಾಹುಲ್ ಕಣ್ಣು ಹೊಡೆದದ್ದೂ ಸಹ ವೈರಲ್ ಆಗುತ್ತಿದೆ.
Discussion about this post