ಕಲ್ಪ ಮೀಡಿಯಾ ಹೌಸ್ | ರಾಯಚೂರು |
ಸ್ನೇಹಿತರು ಹಾಗೂ ಆತನ ಸಹಚರರು ಸೇರಿಕೊಂಡು ಬಾಲಕಿಯೊಬ್ಬಳಿಗೆ ಬಲವಂತವಾಗಿ ಮದ್ಯ ಕುಡಿಸಿ, ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ವರದಿಯಾಗಿದೆ.
ಈ ಕುರಿತಂತೆ ವರದಿಯಾಗಿದ್ದು, ಒಂಬತ್ತನೆಯ ತರಗತಿಯಲ್ಲಿ ಓದುತ್ತಿರುವ ಸಿಂಧನೂರು ನಿವಾಸಿಯಾದ ಸಂತ್ರಸ್ತ ಬಾಲಕಿ ನ. 25 ರಂದು ತನ್ನ ತಾಯಿಯ ಮನೆಗೆ ಹೋಗಿದ್ದಳು. ಹೊಸಪೇಟೆಯಿಂದ ಸಿಂಧನೂರಿಗೆ ವಾಪಸ್ಸಾಗುತ್ತಿದ್ದಾಗ ಸ್ನೇಹಿತ ಕರೆ ಮಾಡಿ ವಾಪಸ್ ಬರುವಂತೆ ಹೇಳಿದ್ದಾನೆ. ಮತ್ತೆ ಆಕೆ ಹೊಸಪೇಟೆಗೆ ಹಿಂತಿರುಗಿದಾಗ ಸಚಿನ್ ಸ್ನೇಹಿತನ ಜೊತೆ ಸೇರಿ ಬಲವಂತವಾಗಿ ಪ್ರವಾಸಕ್ಕೆ ಕರೆದೊಯ್ದಿದ್ದಾನೆ. ಆಕೆಯನ್ನು ಗಂಗಾವತಿಯ ಅಂಜನಾದ್ರಿ ಬೆಟ್ಟಕ್ಕೆ ಕರೆದೊಯ್ಯುವ ವೇಳೆ ಚಲಿಸುತ್ತಿದ್ದ ಕಾರಿನಲ್ಲಿಯೇ ಮದ್ಯ ಸೇವಿಸುವಂತೆ ಒತ್ತಾಯಿಸಿದ್ದಾರೆ. ಬಳಿಕ ಅನುಚಿತವಾಗಿ ಸ್ವರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.
Also read: ಮೈಸೂರು ರಿಂಗ್ ರಸ್ತೆಯಲ್ಲಿ ಲೈಟ್ ಹಾಕಿ ಎರಡೇ ದಿನಕ್ಕೆ ಸ್ವಿಚ್ಸ್ ಕಳವು
ಈ ಕುರಿತಂತೆ ಪ್ರಕರಣ ದಾಖಲಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















