ಕಲ್ಪ ಮೀಡಿಯಾ ಹೌಸ್ | ರಾಯಚೂರು |
ರಾಜ್ಯಾದ್ಯಂತ ಭಾರತೀಯ ಜನತಾ ಪಕ್ಷದ ಸದಸ್ಯತಾ ಅಭಿಯಾನ ಕಾರ್ಯ ಮುಗಿದಿದ್ದು ಈಗ ಬೂತ್ ಮಟ್ಟದ ಸಮಿತಿಗಳನ್ನು ರಚನೆ ಮಾಡಬೇಕಿದೆ ಈ ನಿಟ್ಟಿನಲ್ಲಿ ರಾಯಚೂರು ಜಿಲ್ಲೆಯ ಎಲ್ಲಾ ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಬೂತ್ ಮಟ್ಟದಲ್ಲಿ ಹೆಜ್ಜೆ ಹಾಕಿ ಬೂತ್ ಅಧ್ಯಕ್ಷರನ್ನು ಸಂಪರ್ಕ ಮಾಡಲು ವಿಧಾನ ಪರಿಷತ್ತು ಶಾಸಕರು ಮತ್ತು ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್. ಅರುಣ್ ರವರು #D S Arun ಕರೆ ನೀಡಿದರು.
ಅವರು ಇಂದು ರಾಯಚೂರು ನಗರ, ದೇವದುರ್ಗ ಮತ್ತು ರಾಯಚೂರು ಗ್ರಾಮಾಂತರ ಮಂಡಲ ಅಧ್ಯಕ್ಷರ ಮತ್ತು ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡುತ್ತ ಬಿಜೆಪಿ ಶಿಸ್ತಿನ ಪಕ್ಷ ಅದನ್ನು ಸಂಘಟನಾತ್ಮಕವಾಗಿ ನಾವು ಬೆಳೆಸಬೇಕಿದೆ ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಬೂತ್ ಸಮಿತಿ ರಚನೆಗಳು ನಡೆಯುತ್ತಿದ್ದು ರಾಯಚೂರು ಜಿಲ್ಲೆಯೂ ಸಹ ಬೂತ್ ಸಮಿತಿಗಳನ್ನು ರಚಿಸಿಕೊಂಡು ತನ್ನ ಸ್ಥಾನವನ್ನು ಪ್ರಗತಿಗೊಳಿಸಲು ತಿಳಿಸಿದರು.
Also read: ಬೆಂಗಳೂರು | ಪೂರ್ಣಪ್ರಜ್ಞ ವಿದ್ಯಾಪೀಠ, ನಂಜನಗೂಡು ರಾಯರ ಮಠದಲ್ಲಿ ವಿಶೇಷ ಕಾರ್ಯಕ್ರಮ
ಈ ಸಂದರ್ಭದಲ್ಲಿ ರಾಯಚೂರು ನಗರ ಮಂಡಲ ಅಧ್ಯಕ್ಷರಾದ ಊಟ್ಕೂರು ರಾಘವೇಂದ್ರ, ದೇವದುರ್ಗ ಮಂಡಲ ಅಧ್ಯಕ್ಷರಾದ ಜಂಬಣ್ಣ ನಿಲೋಗಲ್, ರಾಯಚೂರು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಶಂಕರಗೌಡ ಮಿರ್ಜಾಪೂರು ಮತ್ತು ರಾಯಚೂರು ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಕಡಗೋಲು ರಾಮಚಂದ್ರ, ವಿಜಯಕುಮಾರ ಸಜ್ಜನ, ಪಲುಗುಲ ನಾಗರಾಜ, ರಾಯಚೂರು ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಶಿವಕುಮಾರ ರವರು ಉಪಸ್ಥಿತಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post