ಕಲ್ಪ ಮೀಡಿಯಾ ಹೌಸ್ | ರಾಯಚೂರು |
ಬುಧವಾರ ಮೈಸೂರಿನಲ್ಲಿ ಅದ್ದೂರಿಯಾಗಿ ನಡೆದ ಸಿದ್ದರಾಮಯ್ಯರ ನೇತೃತ್ವದ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿರುವ ಗೃಹ ಲಕ್ಷ್ಮೀ ಯೋಜನೆಯ ಉದ್ಘಾಟನೆ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯತಿಗೆ ಆಗಮಿಸಿದ ಗೃಹ ಲಕ್ಷ್ಮೀಯರು Gruhalakshmi ಪಿಡಿಒ ರಾಮಣ್ಣರವರ ತಾತ್ಸಾರ ಮನೋಭಾವಕ್ಕೆ ಬೇಸತ್ತು ಹೊರ ನಡೆದಿದ್ದಾರೆ.
ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲು ಬಂದಿದ್ದ ಮಹಿಳೆಯರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಪಾಮನಕಲ್ಲೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಮಣ್ಣರವರು ವಿಫಲವಾಗಿದ್ದಾರೆ ಎಂದು ಆರೋಪಿಸಿದ ಘಟನೆ ಬುಧವಾರ ಕಂಡುಬಂದಿದೆ.
ಕಾರ್ಯಕ್ರಮ ಆರಂಭವಾಗುವ ಮುನ್ನವೇ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಮಹಿಳೆಯರು ಪಂಚಾಯತಿ ಕಛೇರಿಗೆ ಆಗಮಿಸಿದ್ದರು. ಪಂಚಾಯತಿಯವರು ಕುರ್ಚಿ ವ್ಯವಸ್ಥೆ ಸರಿಯಾಗಿ ಮಾಡಿಲ್ಲ. ಕುಳಿತುಕೊಳ್ಳಲು ಸ್ಥಳವಿಲ್ಲ, ಕಾರ್ಯಕ್ರಮ ವೀಕ್ಷಣೆಗೆ ಸ್ಕ್ರೀನ್ ವ್ಯವಸ್ಥೆ ಸರಿಯಾಗಿ ಮಾಡಿಲ್ಲ. ಎಲ್ಲವೂ ಅವ್ಯವಸ್ಥೆಯಿಂದ ಕೂಡಿದೆ ಎಂದು ಬೇಸರಗೊಂಡ ನೂರಾರು ಜನ ಮಹಿಳೆಯರು ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹೊರ ನಡೆದರು.
Also read: ಸೆ.2ರಂದು ಬ್ರಹ್ಮೀಭೂತ ಶ್ರೀ ವಾಸುದೇವ ಮಹಾರಾಜ್ ಸದ್ಭಾವನಾ ಪ್ರಶಸ್ತಿ ಪ್ರದಾನ
ನಾವು ಇಷ್ಟು ಜನರಿಗೆ ಕಾರ್ಯಕ್ರಮ ವೀಕ್ಷಣೆಗೆ ಕರೆದಿರಲಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ನಾವು ಇಷ್ಟು ಜನಕ್ಕೆ ವ್ಯವಸ್ಥೆ ಮಾಡಲಾಗಲ್ಲ ಎಂಬ ಬೇಜವಾಬ್ದಾರಿ ಮಾತುಗಳನ್ನಾಡಿದ ಪಿಡಿಒ ರಾಮಣ್ಣರವರು, ಬಂದ ಬಹುತೇಕ ಮಹಿಳೆಯರು ಹೊರ ಹೋದ ಬಳಿಕ, ಕಾರ್ಯಕ್ರಮ ಆರಂಭವಾಗಿ ಕೆಲ ಸಮಯ ಕಳೆದ ನಂತರ ಅಲ್ಲಿದ್ದ ಅಲ್ಪ ಸ್ವಲ್ಪ ಜನರಿಗೆ ಮತ್ತು ಬಹುತೇಕ ಖಾಲಿ ಕುರ್ಚಿಗಳಿಗೆ ಕಾರ್ಯಕ್ರಮದ ದರ್ಶನ ಮಾಡಿಸಿದರು. ಪಿಡಿಒ ರಾಮಣ್ಣರವರ ನಡೆಯನ್ನು ಅಲ್ಲಿ ನೆರೆದಿದ್ದ ಬಹುತೇಕರು ಖಂಡಿಸಿ, ಆಕ್ರೋಶ ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post