ಕಲ್ಪ ಮೀಡಿಯಾ ಹೌಸ್ | ರಾಯಚೂರು |
ರಾಯಚೂರು ಮತ್ತು ಗಿಣಿಗೇರಾ ರೈಲು ನಿಲ್ದಾಣಗಳ ಮಧ್ಯದ ಪೋಟ್ನಾಳದಲ್ಲಿ ಹೊಸ ಕ್ರಾಸಿಂಗ್ ರೈಲ್ವೆ ನಿಲ್ದಾಣಕ್ಕೆ #Crossing Railway Station ಮಂಜೂರಾತಿ ದೊರೆತಿದೆ.
ಈ ನೂತನ ನಿಲ್ದಾಣದ ನಿರ್ಮಾಣದ ಕುರಿತು ಇಲಾಖೆ ರೂಪರೇಷೆ ಸಿದ್ದಪಡಿಸುತ್ತಿದ್ದು, ಇದರ ನಂತರ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗುತ್ತದೆ.
Also read: ಕಲಿಕೆಯಲ್ಲಿ ಮಾತೃಭಾಷೆಗೆ ಮೊದಲ ಪ್ರಾಧಾನ್ಯತೆ ನೀಡಿ: ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ
ಈ ಹೊಸ ನಿಲ್ದಾಣವು ಎರಡು ಹೈ-ಲೆವೆಲ್ ಪ್ಲಾಟ್’ಫಾರಂಳನ್ನು ಹೊಂದಿರಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಇಲ್ಲಿ ಪ್ಲಾಟ್’ಫಾರಂಗಳನ್ನು ಸಂಪರ್ಕಿಸುವ ಮೇಲ್ಸೇತುವೆ, ಟಿಕೇಟ್ ಕೌಂಟರ್, ಪ್ರಯಾಣಿಕರ ಕಾಯ್ದಿರಿಸುವ ಕೊಠಡಿ, ಟ್ರಾಲಿ ಸಂಚಾರ ಮಾರ್ಗ, ಶೌಚಾಲಯ ಸೌಲಭ್ಯ ಹಾಗೂ ಮುಖ್ಯ ರಸ್ತೆಗೆ ಸಂಪರ್ಕ ಸಾಧಿಸುವ ರಸ್ತೆ ಮಾರ್ಗವನ್ನು ನಿರ್ಮಿಸಲಾಗುತ್ತದೆ.
ಈ ನಿಲ್ದಾಣವು ಹತ್ತಿರದಲ್ಲಿರುವ ಹಿರೆಕೊಟ್ನಗಲ್ ಮತ್ತು ಜವಲಗೇರಿ ರೈಲು ನಿಲ್ದಾಣಗಳಿಗೆ ಸಮೀಪವಾಗಿದ್ದು, ಈ ಪ್ರದೇಶದ ರೈಲು ಸಂಪರ್ಕದಲ್ಲಿ ಮತ್ತಷ್ಟು ಅನುಕೂಲ ಆಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post