ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಮುಂದಿನ ಎರಡು ವರ್ಷಗಳಲ್ಲಿ ದೇಶದಾದ್ಯಂತ 7800 ಕಿಲೋಮೀಟರಗಳಿಗೂ ಹೆಚ್ಚು ಹಳಿಗಳನ್ನು ನವೀಕರಿಸಲು ಭಾರತೀಯ ರೈಲ್ವೆ ಯೋಚಿಸಿದೆ.
ಈ ಕುರಿತಂತೆ ಭಾರತೀಯ ರೈಲ್ವೆ ಮಾಹಿತಿ ಪ್ರಕಟಿಸಿದ್ದು, ಪ್ರಸಕ್ತ ಹಣಕಾಸು ವರ್ಷ 2025-26 ರಲ್ಲಿ 7 ಸಾವಿರದ 5 ನೂರು ಕಿಲೋಮೀಟರ್’ಗಳಿಗೂ ಹೆಚ್ಚು ಹಳಿ ನವೀಕರಣ ಕಾರ್ಯ ನಡೆಯುತ್ತಿದೆ. ಕಳೆದ ಹಣಕಾಸು ವರ್ಷದಲ್ಲಿ ಈಗಾಗಲೇ 6 ಸಾವಿರದ 8 ನೂರು ಕಿಲೋಮೀಟರ್’ಗಳಿಗೂ ಹೆಚ್ಚು ಹಳಿ ನವೀಕರಣ ಕಾರ್ಯ ನಡೆದಿದೆ ಎಂದು ತಿಳಿಸಿದೆ.
ಹೈ-ಸ್ಪೀಡ್ ಸಾಮರ್ಥ್ಯದ ಹಳಿಗಳ ಉದ್ದವು ಸುಮಾರು ದ್ವಿಗುಣಗೊಂಡಿದೆ. 2014 ರಲ್ಲಿ 31 ಸಾವಿರ ಕಿಲೋಮೀಟರ್’ಗಳಿಂದ ಈಗ 84 ಸಾವಿರ ಕಿಲೋಮೀಟರ್’ಗಳಿಗೆ ತಲುಪಿದೆ. ಇದು ರಾಷ್ಟ್ರೀಯ ರೈಲು ಜಾಲದ ಶೇಕಡಾ ಎಂಬತ್ತರಷ್ಟು ಭಾಗದಲ್ಲಿ ಗಂಟೆಗೆ 110 ಕಿಲೋಮೀಟರ್ ಜೊತೆಗೆ ಕಾರ್ಯಾಚರಣೆಗಳನ್ನು ಸಕ್ರಿಯಗೊಳಿಸಿದೆ ಎಂದು ತಿಳಿಸಿದೆ.
ಕಳೆದ 11 ವರ್ಷಗಳಲ್ಲಿ, ರೈಲ್ವೆಗಳು ತನ್ನ ಹಳಿಗಳ ಮೂಲಸೌಕರ್ಯವನ್ನು ಬಲಪಡಿಸಿವೆ. ನಿರಂತರ ಹೂಡಿಕೆ ಮತ್ತು ಕೇಂದ್ರೀಕೃತ ಅನುಷ್ಠಾನದ ಮೂಲಕ ಸುರಕ್ಷತಾ ಮಾನದಂಡಗಳನ್ನು ಹೆಚ್ಚಿಸಿವೆ ಎಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















