ಚೆನ್ನೈ: ಈಗಾಗಲೇ ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿದ, ಚಿತ್ರರಂಗದಲ್ಲೇ ಸದ್ಯ ಹೊಸ ಸಾಹಸಗಳನ್ನು ಮುಂದುವರೆಸಿರುವ ಸೂಪರ್ ಸ್ಟಾರ್ ರಜನಿಕಾಂತ್, ಈಗ ಹೊಸ ಚಿತ್ರದ ಸಿದ್ದತೆಯಲ್ಲಿದ್ದಾರೆ.
ಎ.ಆರ್. ಮುರುಗದಾಸ್ ನಿರ್ದೇಶನದ ದರ್ಬಾರ್ ಚಿತ್ರದಲ್ಲಿ ತಲೈವಾ ನಟಿಸುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೋಸ್ಟಲ್ ರಿವೀಲ್ ಮಾಡಲಾಗಿದ್ದು, ವಿಶ್ವದಾದ್ಯಂತ ರಜನಿ ಅಭಿಮಾನಗಳಲ್ಲಿ ಹುಚ್ಚೆಬ್ಬಿಸಿದೆ.
Here you go guys!!! The first look of our very own Thalaivar in #Darbar @rajinikanth @LycaProductions #nayanthara @santoshsivan @anirudhofficial #sreekarprasad #pongal2020 pic.twitter.com/SQesHjoNvh
— A.R.Murugadoss (@ARMurugadoss) April 9, 2019
ಚಿತ್ರದಲ್ಲಿ ರಜಿನಿಗೆ ನಾಯಕಿಯಾಗಿ ನಯನತಾರ ಆಯ್ಕೆಯಾಗಿದ್ದು, ಭಾರೀ ನಿರೀಕ್ಷೆ ಹುಟ್ಟಿಸಿದೆ. ದರ್ಬಾರ್ ಸೂಪರ್ ಸ್ಟಾರ್ ನಟನೆಯ 167 ನೇ ಸಿನಿಮಾ ಆಗಿದೆ.
ಸದ್ಯ ಲೋಕಸಭಾ ಚುನಾವಣೆಯಿಂದ ಹಿಂದೆ ಸರಿದಿರುವ ಸೂಪರ್ ಸ್ಟಾರ್, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುದುದಾಗಿ ಸ್ಪಷ್ಟನೆ ನೀಡಿದ್ದಾರೆ.
Discussion about this post