ಕಲ್ಪ ಮೀಡಿಯಾ ಹೌಸ್ | ರಜೌರಿ (ಜಮ್ಮು) |
ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿರುವ ಗಡಿ ನಿಯಂತ್ರಣ ರೇಖೆ ಬಳಿಯಲ್ಲಿ ಭಾರತದೊಳಕ್ಕೆ ನುಸುಳಲು ಯತ್ನಿಸಿದ ಉಗ್ರರ #Terrorist ವಿರುದ್ಧ ಭಾರತೀಯ ಸೇನೆ ಎನ್ ಕೌಂಟರ್ ನಡೆಸಿದ್ದಾರೆ.
ಎನ್’ಒಸಿ ಬಳಿಯಲ್ಲಿ ದೇಶದೊಳಕ್ಕೆ ಉಗ್ರರು ನುಸುಳಲು ಯತ್ನ ನಡೆಸಿದ್ದು, ಈ ವಿಚಾರ ತಿಳಿದ ಭಾರತೀಯ ಯೋಧರ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಇದರ ಭಾಗವಾಗಿ ಎನ್ ಕೌಂಟರ್ ನಡೆಸಿದ್ದು, ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ.
Also read: ದರ್ಶನ್ ಪ್ರಕರಣ | ಹತ್ಯೆಯಾದ ರೇಣುಕಾಸ್ವಾಮಿ ಕುರಿತು ಶಾಕಿಂಗ್ ಮಾಹಿತಿ ಬಹಿರಂಗ | ಏನದು?
ನೌಶೇರಾದ ಲಾಮ್ ಸೆಕ್ಟರ್’ನಲ್ಲಿ ನಿನ್ನೆ ತಡರಾತ್ರಿ ಗುಂಡಿನ ಚಕಮಕಿ ನಡೆದಿದ್ದು, ಈ ಭಾಗದಲ್ಲಿ ಅಡಗಿರುವ ಉಗ್ರರಿಗಾಗಿ ಬೃಹತ್ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಎಲ್‌ಒಸಿಯನ್ನು ಕಾವಲು ಕಾಯುತ್ತಿರುವ ಸೇನಾ ಪಡೆಗಳು ಕತ್ತಲೆಯಲ್ಲಿ ಒಳನುಸುಳಲು ಪ್ರಯತ್ನಿಸುತ್ತಿದ್ದ ಉಗ್ರರ ಚಲನವಲನ ಅರಿತು ಗುಂಡಿನ ದಾಳಿ ನಡೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post