ಕಲ್ಪ ಮೀಡಿಯಾ ಹೌಸ್ | ರಾಮನಗರ |
ಕರ್ನಾಟಕದಲ್ಲಿ ಎನ್’ಡಿಎಗೆ 28 ಸ್ಥಾನಗಳನ್ನು ಗೆಲ್ಲಿಸಿಕೊಟ್ಟರೆ ಮೋದಿಯವರ ಕೈ ಹಿಡಿದು ಮೇಕೆದಾಟು ಯೋಜನೆಗೆ ಸಹಿ ಹಾಕಿಸುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ. ದೇವೇಗೌಡ #H D Devegowda ಭರವಸೆ ನೀಡಿದ್ದಾರೆ.
ತಮ್ಮ ಅಳಿಯ, ಮೈತ್ರಿ ಅಭ್ಯರ್ಥಿ ಡಾ. ಮಂಜುನಾಥ್ #Dr. Manjunath ಅವರ ಪರವಾಗಿ ಹಾರೋಹಳ್ಳಿಯಲ್ಲಿ ಪ್ರಚಾರ ನಡೆಸಿದ ವೇಳೆ ಅವರು ಮಾತನಾಡಿದರು.

Also read: ಕೈಕೊಟ್ಟ ಸುಮಲತಾ? ಏಕಾಏಕಿ ಮಂಡ್ಯ ಪ್ರಚಾರ ರದ್ದು | ಬೆಂಗಳೂರಿನಲ್ಲೇ ವಾಸ್ತವ್ಯ
ನನಗೆ ಕನಕಪುರ ಹೊಸದಲ್ಲ. ಹಿಂದೆ ನನ್ನ ವಿರುದ್ಧ ತೇಜಸ್ವಿನಿ ಎಂಬ ಹೆಣ್ಣುಮಗಳನ್ನು ನಿಲ್ಲಿಸಿ ಸೋಲಿಸಿದ್ದರು. ಮತ್ತೆ ಅದೇ ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಪ್ರಧಾನಿ ಆಗಿದ್ದೆ. ನನ್ನನ್ನ ಪ್ರಧಾನಿ ಮಾಡಿದ್ದು ಇದೇ ಕ್ಷೇತ್ರದ ಮಹಾಜನತೆ ಎಂದು ನೆನಪಿಸಿಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post