ಕಲ್ಪ ಮೀಡಿಯಾ ಹೌಸ್ | ರಾಮನಗರ |
ಅದು ಬಾಳಿ ಬದುಕಬೇಕಿದ್ದ 4 ವರ್ಷದ ಕೂಸು. ಆದರೆ, ಈಗ ಕಾಮುಕನೊಬ್ಬನ ವಿಕೃತ ಕೃತ್ಯಕ್ಕೆ ತನ್ನ ಪ್ರಾಣವನ್ನೇ ಕಳೆದುಕೊಂಡಿದೆ.
ಹೌದು… ಆಗಾಗ ಮನೆಗೆ ಬಂದು ಹೋಗುತ್ತಿದ್ದ ವ್ಯಕ್ತಿಯೊಬ್ಬ ಕರೆದ ಹಿನ್ನೆಲೆಯಲ್ಲಿ ಮುಗ್ದವಾಗಿ ನಂಬಿ ಹೋದ 4 ವರ್ಷದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಅತ್ಯಾಚಾರ #Rape ನಡೆಸಿ, ಕೊಲೆ ಮಾಡಿರುವ ಘಟನೆ ನಡೆದಿದೆ.
ರಾಮನಗರ #Ramanagar ಜಿಲ್ಲೆ ಮಾಗಡಿ ಒಟ್ಟಣದಲ್ಲಿ ಘಟನೆ ನಡೆದಿದ್ದು, ನಾಪತ್ತೆಯಾಗಿದ್ದ ತಮ್ಮ ಮಗಳನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂಬ ವಿಚಾರ ಪೊಲೀಸರು ಪೋಷಕರಿಗೆ ತಿಳಿಸುತ್ತಿದ್ದರು. ತಂದೆ-ತಾಯಿಗೆ ಭೂಮಿ ಬಾಯಿಬಿರಿದಂತಾಗಿತ್ತು. ಆಗಾಗ ತಮ್ಮ ಮನೆಗೆ ಬಂದು ಹೋಗುತ್ತಿದ್ದ ಬೆಂಗಳೂರಿನ ಆ ಸಂಬಂಧಿ ಇರ್ಫಾನ್, ಅಂದು ಕೂಡ ತಮ್ಮ ಮನೆಗೆ ಬಂದಿದ್ದ.
Also read: ಶಿಮುಲ್ ಚುನಾವಣೆ | ಅಧ್ಯಕ್ಷರಾಗಿ ವಿದ್ಯಾಧರ್, ಉಪಾಧ್ಯಕ್ಷರಾಗಿ ಚೇತನ್ ಆಯ್ಕೆ

ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಿದ್ದಾರೆ. ಮೊದಲಿಗೆ ಬಾಲಕಿ ತನ್ನ ವಾಹನದ ಜೊತೆ ಬರುವಾಗ ಅಪಘಾತವಾಗಿದೆ ಎಂದು ನಾಟಕ ಮಾಡಿದ ಆರೋಪಿ, ಬಳಿಕ ಪೊಲೀಸರ ಭಾಷೆಯಲ್ಲಿ ಕೇಳಿದಾಗ, ನಡೆದ ಕೃತ್ಯವನ್ನು ಬಾಯಿಬಿಟ್ಟಿದ್ದಾನೆ.
ಹುಬ್ಬಳ್ಳಿ: ಆಟವಾಡುವ ನೆಪದಲ್ಲಿ ಏಳು ವರ್ಷದ ಬಾಲಕಿ ಮೇಲೆ 55 ವರ್ಷದ ವ್ಯಕ್ತಿ ಅತ್ಯಾಚಾರ ನಡೆಸಿರುವ ದಾರುಣ ಘಟನೆ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸದ್ಯ ಆರೋಪಿ ನೂರ್ ಅಹ್ಮದ್ ಎಂಬಾತನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post