ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್’ಗೆ ಹೋಲಿಸಿ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾಗೆ ನಟ ಜಗ್ಗೇಶ್ ಹಾಗೂ ಬುಲೆಟ್ ಪ್ರಕಾಶ್ ತರಾಟೆಗೆ ತೆಗದುಕೊಂಡ ಬೆನ್ನಲ್ಲೇ, ಮೀಟೂ ಚಿತ್ರದ ನಿರ್ದೇಶಕ ಕಿರಿಕ್ ಹುಡುಗ ಕೀರ್ತನ್ ಸಹ ಕಿಡಿ ಕಾರಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಕೀರ್ತನ್, ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ ಆದರೂ ಇತ್ತೀಚೆಗೆ ಈ ಪದ್ಮಾವತಿಯ ಹುಚ್ಚು ಅವತಾರ ನೋಡಿದ್ರೇ ಇವರು #ಗೋಡ್ಸೆ ಸಂತತಿಗೆ ಸೇರಿದವರೆಂದು ಗೊತ್ತಾಗುತ್ತದೆ ದಯಮಾಡಿ @RahulGandhi ಯವರೇ ಈ ಯಮ್ಮನ ದೂರವಿಡಿ ಗಾಂಧೀಜಿಗೆ ಆದ ಪರಿಸ್ಥಿತಿ ನಿಮಗೆ ಆದಿತ್ತು ರಮ್ಯ ಅವರನ್ನು ಕರ್ನಾಟಕದಿಂದ ಬಹಿಷ್ಕಾರಿಸಬೇಕು ಎಂದು ಕಿಡಿ ಕಾರಿದ್ದಾರೆ.
ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ ಆದರೂ ಇತ್ತೀಚೆಗೆ ಈ ಪದ್ಮಾವತಿಯ ಹುಚ್ಚು ಅವತಾರ ನೋಡಿದ್ರೇ ಇವರು #ಗೋಡ್ಸೆ ಸಂತತಿಗೆ ಸೇರಿದವರೆಂದು ಗೊತ್ತಾಗುತ್ತದೆ ದಯಮಾಡಿ @RahulGandhi ಯವರೇ ಈ ಯಮ್ಮನ ದೂರವಿಡಿ ಗಾಂಧೀಜಿಗೆ ಆದ ಪರಿಸ್ಥಿತಿ ನಿಮಗೆ ಆದಿತ್ತು ರಮ್ಯ ಅವರನ್ನು ಕರ್ನಾಟಕದಿಂದ ಬಹಿಷ್ಕಾರಿಸಬೇಕು 👺👺👺
— KirikHuduga Keerthan (@GajaKeerthan) April 30, 2019
ಈ ವಿಚಾರದಲ್ಲಿ ನಟ ಬುಲೆಟ್ ಪ್ರಕಾಶ್ ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ನಟ ಜಗ್ಗೇಶ್, ಸಹೋದರ, ದಾರಿ ತಪ್ಪಿದ ಮಕ್ಕಳನ್ನು ತಿದ್ದಬಹುದು. ಆದರೆ ದಾರಿ ತಪ್ಪಲೆಂದೇ ಹುಟ್ಟಿದ ಮಕ್ಕಳ ತಿದ್ದಬಾರದು. ಹೀಗೆ ದಾರಿ ತಪ್ಪಲು ಹುಟ್ಟಿದ ಮಕ್ಕಳ ಇತಿಹಾಸವೇ ಯಕ್ಷಪ್ರಶ್ನೆ. ಜನನವು ಹೇಗೋ ಹಾಗೇ ಜೀವನ. ಅಂಥ ಮಕ್ಕಳ ಬಗ್ಗೆ ಅನುಕಂಪ ವಹಿಸಬೇಕು. ಅಂಥವರೆಲ್ಲ ಮಾನಸಿಕ ವಿಕಲಚೇತನರು. ಇಂತಹವರನ್ನು ನೋಡಿ ಕೂಡ ಸಂತೋಷ ಪಡುವ ಜನರು ಇರುವುದು ದೌರ್ಭಾಗ್ಯ ಎಂದು ವ್ಯಂಗ್ಯಭರಿತವಾಗಿ ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾನದಲ್ಲಿ ಭಾರೀ ವೈರಲ್ ಆಗಿದೆ.
ರಮ್ಯಾ ಟ್ವೀಟ್’ಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದ ನಟ ಬುಲೆಟ್ ಪ್ರಕಾಶ್, ಇಡೀ ವಿಶ್ವವೇ ಮೋದಿಗೆ ಸೆಲ್ಯೂಟ್ ಹೊಡೆಯುವಾಗ ರಮ್ಯಾ ಅವರು ಹೀಯಾಳಿಸೋದು ಸರಿಯಲ್ಲ. ಗಣ್ಯವ್ಯಕ್ತಿಗಳ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಬೇಕು. ರಾಜಕೀಯ ತಜ್ಞರ ಬಳಿ ಟ್ಯೂಷನ್ ಗೆ ಹೋಗಿ ಕಲಿತುಕೊಳ್ಳಿ. ಜನರಿಗೆ ತಪ್ಪು ಸಂದೇಶ ರವಾನೆ ಮಾಡ್ಬೇಡಿ ರಮ್ಯಾ ಮೇಡಂ ಎಂದಿದ್ದರು.
Discussion about this post