ಕಲ್ಪ ಮೀಡಿಯಾ ಹೌಸ್ | ರಾಣೆಬೆನ್ನೂರು |
ಕರಾವಳಿ-ಮಲೆನಾಡು-ಬಯಲುಸೀಮೆಯನ್ನು ಸಂಪರ್ಕಿಸುವ ರಾಣೆಬೆನ್ನೂರು-ಕೊಲ್ಲೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಸಂಸದ ಬಿ.ವೈ. ರಾಘವೇಂದ್ರ MPRaghavendra ಸೂಚಿಸಿದರು.
ರಾಣೆಬೆನ್ನೂರು-ಕೊಲ್ಲೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿ 766 ಸಿ Ranebennuru-Kolluru-Bynduru NH ಕಾಮಗಾರಿಯನ್ನು ರಟ್ಟೆಹಳ್ಳಿಯಲ್ಲಿ ವೀಕ್ಷಿಸಿದ ನಂತರ ರಾಣೆಬೆನ್ನೂರಿನ ಸರ್ಕ್ಯೂಟ್ ಹೌಸ್’ನಲ್ಲಿ ನಡೆದ ಸಭೆಯಲ್ಲಿ ಸಂಸದರು ಮಾತನಾಡಿದರು.

ಈ ರಸ್ತೆ ಕಾಮಗಾರಿಗೋಸ್ಕರ ಸುಮಾರು 218.93 ಕೋಟಿ ಅನುದಾನದಾನದಲ್ಲಿ ಈಗಾಗಲೇ ರೂ. 170 ಕೋಟಿ ಅನುದಾನ ಮಂಜೂರಾತಿಯಾಗಿದೆ. ಒಟ್ಟು 27.70 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ಪೀಸ್ ವರ್ಕ್ ಅಡಿಯಲ್ಲಿ ಕೆಲಸ ನಡೆಯುತ್ತಿದೆ ಎಂದರು.

ಕೊಲ್ಲೂರು ಸೇರಿದಂತೆ ನಾಗೋಡಿ ಸೇರಿ 27 ಕೋಟಿ ರೂ. ಹಣ ಮಂಜೂರಾತಿಯಾಗಿದೆ. ವಿಶೇಷವಾಗಿ ತಿಪ್ಪಾಯಿಕೊಪ್ಪ ದಾ ಹತ್ತಿರ ದೊಡ್ಡದಾದ ಸೇತುವೆ ಈಗಾಗಲೇ ಪೂರ್ಣಗೊಂಡಿದೆ. ಮುಂದುವರಿದ ಕಾಮಗಾರಿಕೆ ಆದಷ್ಟು ಬೇಗ ಡಿಪಿಆರ್ ಬಿಟ್ಟುಹೋದ ಜಾಗಕ್ಕೆ ಮುಂದುವರಿಸುವ ಕಾರ್ಯ ಪ್ರಗತಿಯಲ್ಲಿದೆ. 47 ಕಿಮೀ ರಸ್ತೆ ಅಭಿವೃದ್ಧಿಗೆ ಕೈಗೊಳ್ಳಲಾಗುತ್ತಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post