ಬೆಂಗಳೂರು: ರಾಜಕೀಯ ಪ್ರವೇಶದ ಹೆಜ್ಜೆಯಲ್ಲಿರುವ ಸುಮಲತಾ ಅಂಬರೀಶ್ ಅವರ ಕುರಿತಾಗಿ ಅವಮಾನಕರ ಹೇಳಿಕೆ ನೀಡಿರುವ ಸಚಿವ ಎಚ್.ಡಿ. ರೇವಣ್ಣ ಕುರಿತಾಗಿ ತೀವ್ರ ಆಕ್ರೋಶ ರಾಜ್ಯದೆಲ್ಲೆಡೆ ವ್ಯಕ್ತವಾಗಿದೆ.
ಅಂತೆಯೇ, ರೇವಣ್ಣ ಈ ರೀತಿ ಹೇಳಿಕೆ ನೀಡಿರುವುದರ ವಿಚಾರದಲ್ಲಿ ಸುಮಲತಾ ಪರವಾಗಿ ಇಡಿಯ ಚಿತ್ರರಂಗ ನಿಲ್ಲಬೇಕು ಎಂದು ನಟ ಜಗ್ಗೇಶ್ ಹೇಳಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಅಂಬಿ ಸತ್ತಾಗ ಸುತ್ತಲು ಇದ್ದ ಉದ್ಯಮದ ಸನ್ಮಿತ್ರರೆ ಈಗಲಾದರು ಬಾಯಿತೆಗೆದು ಇಂಥ ಮಾತುಗಳನ್ನು ಖಂಡಿಸಬೇಕು! ಆಗಲೆ ಉದ್ಯಮಕ್ಕೆ 40 ವರ್ಷ ರಕ್ತಬಸಿದ ನಮ್ಮ ಹಿರಿಯಣ್ಣನಿಗೆ ಆತ್ಮಶಾಂತಿ!
ಕಾಯುವೆ ನಮ್ಮ ಉಧ್ಯಮ ಹೇಗೆ ಪ್ರತಿಕ್ರಿಯಿಸುತ್ತದೆ! ಕಾರಣ ರಾಜಕೀಯ ಪಕ್ಷಗಳು ನೂರಿರಲಿ ನಾವು ಶಾರದೆಯ ಮಕ್ಕಳು! ನೆನಪಿಡಿ ಚಿತ್ರರಂಗವೆ! ಇದು ಉದ್ಯಮಕ್ಕೆ ಅಪಮಾನ! ಎಂದಿದ್ದಾರೆ.
ಇನ್ನು ಇದಕ್ಕೂ ಮುನ್ನ ರೇವಣ್ಣ ವಿರುದ್ಧವೂ ಸಹ ಜಗ್ಗೇಶ್ ಕಿಡಿ ಕಾರಿ ಟ್ವೀಟ್ ಮಾಡಿದ್ದಾರೆ.
ರೇವಣ್ಣರವರೆ ನೀವು ಸಾಮಾನ್ಯ ಜನರಲ್ಲಾ! ಈ ದೇಶದ ಮಾಜಿ ಪ್ರಧಾನಿ ಮಗ! ಸಂವಿಧಾನ ಭಾರತದ ಎಲ್ಲಾ ಪ್ರಜೆಗೂ ವೈಯಕ್ತಿಕ ಅಭಿಪ್ರಾಯ ಮಂಡಿಸುವ ಹಕ್ಕುನೀಡಿದೆ! ನಿಮ್ಮ ಮನೆಯ ಸದಸ್ಯರಾಗಿದ್ದರೆ ಹೀಗೆ ಮಾತಾಡುತ್ತಿದ್ದರ?
ಅಂಬಿ ಮೌನವೆ ಜೆಡಿಎಸ್ ಪುಟ್ಟರಾಜ ಗೆದ್ದದ್ದು ಅಂತ ದೊಡ್ಡಗೌಡರೆ ಹೇಳಿದ್ದರು ನೆನಪಿಡಿ! ನನ್ನ ಪಕ್ಷ ಬೇರೆ! ಆದರೆ ಸುಮಲತ ನನ್ನ ಉದ್ಯಮದ ಹೆಣ್ಣು ಗೌರವಿಸಿ! ಎಂದು ಚಾಟಿ ಬೀಡಿದ್ದಾರೆ.
Discussion about this post