No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
  • Advertise With Us
  • Grievances
  • About Us
  • Contact Us
Thursday, July 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಒಮ್ಮೆಯಾದರೂ ‘ಗಂಧದ ಮಾಲೆ’ ಆಸ್ವಾದಿಸಿ ಬಿಡಿ

ಮಾಹಿತಿಗಳ ರಾಶಿಯನ್ನು ಚಂದದ ಮಾಲೆ ಪೋಣಿಸುವುದು ರೋಹಿತ್ ಚಕ್ರತೀರ್ಥರಿಗೆ ಸಿದ್ಧಿಸಿದ ವಿದ್ಯೆ

kalpa News by kalpa News
December 24, 2020
in Small Bytes, ಸಚಿನ್ ಪಾರ್ಶ್ವನಾಥ್
0
ಒಮ್ಮೆಯಾದರೂ ‘ಗಂಧದ ಮಾಲೆ’ ಆಸ್ವಾದಿಸಿ ಬಿಡಿ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಹೆಸರಿನಲ್ಲಿಯೇ ಒಂದು ಚಂದದ ಸುವಾಸನೆ ಇದೆ. ಕರ್ತೃ ರೋಹಿತ್ ಚಕ್ರತೀರ್ಥ. ರಾಶಿ ರಾಶಿ ಮಾಹಿತಿಗಳ ಆಸ್ಥೆಯಿಂದ ಆರಿಸಿ ತಂದು ತಂದು ಚಂದದ ಮಾಲೆ ಕಟ್ಟುವುದು ರೋಹಿತರಿಗೆ ಸಿದ್ಧಿಸಿದ ವಿದ್ಯೆ. ಅವರ ಅಂಕಣಗಳ ಗುಚ್ಛವೇ ಈ ಗಂಧದ ಮಾಲೆ. ಬದುಕಿನಲ್ಲಿ ಎಷ್ಟೇ ವೈರುಧ್ಯವಿರಲಿ, ವ್ಯಸ್ತತೆಯಿರಲಿ ಎಲ್ಲವನ್ನೂ ಬದಿಗೆ ಸರಿಸಿ ಒಮ್ಮೆ ಅವರ ಯಾವುದಾದರೊಂದು ಪುಸ್ತಕ ತೆರೆಯಿರಿ. ತುಟಿಯ ಮೇಲೆ ಒಂದು ಪುಟ್ಟ ನಗು, ಕಣ್ಣುಗಳಲ್ಲಿ ನಿಲ್ಲದೇ ಓಡುವ ಕಾತುರ ಎಲ್ಲಿಯಾದರೂ ನಿಂತಿತು ಎಂದರೆ ಕೇಳಿ. ಮಿಗಿಲಾಗಿ ಈ ಸಾಲುಗಳು ನನ್ನ ವಿಮರ್ಶೆಯಲ್ಲ, ನನ್ನ ಅನುಭವ.

ಶ್ರೀ ರೋಹಿತ್ ಚಕ್ರತೀರ್ಥ ಅವರು ದಿನಪತ್ರಿಕೆಗೆ ಬರೆಯುತ್ತಿದ್ದ ವ್ಯಕ್ತಿಚಿತ್ರಗಳ ಸಂಗ್ರಹ ಈ ಗಂಧದ ಮಾಲೆ. ಇನ್ನಷ್ಟು ಬೇಕೆನಿಸುವ ರುಚಿ ಹುಟ್ಟಿಸುವ ಹಲವು ವಿಶಿಷ್ಟತೆಗಳ ಸಂಗ್ರಹ. ನಿಮ್ಮ ಮೇಜಿನ ಮೇಲಿನ ಕಾಫಿ ಹಾಗೇ ಇರುತ್ತದೆ, ಆದರೆ ಪುಸ್ತಕದೊಳಗಿನ ನಿಮ್ಮ ತಲೆಯನ್ನು ಹೊರ ಜಗತ್ತಿಗೆ ಬಿಡದಷ್ಟು ಕುತೂಹಲ ಕಟ್ಟುವ ಪುಸ್ತಕ. ಓದಲು ಕುಳಿತಿರೆಂದರೆ ಪದಗಳ ಪರ್ಯಟನೆಗೆ ಕುಳಿತಂತೆ. ಅಮೆರಿಕೆಯ ಈಸಿ ಎಡ್ಡಿಯಿಂದ ಹಿಡಿದು ವಿರಾಟ್ ಕೊಹ್ಲಿ, ಕಲ್ಪನಾ ಚಾವ್ಲಾ ಹೀಗೆ ಹಲವರು ತಮ್ಮ ಬಗ್ಗೆ ಹೇಳುತ್ತಾರೆ. ಬದುಕು ಕಟ್ಟಿಕೊಂಡವನ ಕತೆಯಿಂದ ಹಿಡಿದು ನಾಡು ಕಟ್ಟಿದವ, ದೇಶ ಕಟ್ಟಿದವ, ಜಗತ್ತು ಗೆದ್ದವ ಕೊನೆಗೆ ಸಾವಿಗೂ ತೊಡೆ ತಟ್ಟಿದವರ ಜೀವಂತ ಬದುಕುಗಳಿದೆ. ಎಲ್ಲಿಯ ತನಕ ಎಂದರೆ ಅಕ್ಷರಮತ್ತನಾದ ಓದುಗನ ಪಾತ್ರಗಳು ಬಂದು ತೋಳುಗಳಿಗೆ ಭುಜ ಕೊಟ್ಟು ದೂರ ಒಯ್ದಂತೆ.

ಗಂಧದ ಮಾಲೆ ಹೊತ್ತಿಗೆಯ ಒಂದೆರಡು ತುಣುಕುಗಳ ಹಂಚಿಕೊಳ್ಳುವೆ. ಪುಟ್ಟ ಕಂದಮ್ಮಗಳ ಚಂದದ ಕಿರು ಪದ್ಯಗಳ ಹೆಕ್ಕಿ ತಂದು ಗಂಧದ ಮಾಲೆಗೆ ಘಮ್ಮೆನ್ನುವ ಗುಲಾಬಿ ಬಣ್ಣದ ಹೂಗಳ ಪೋಣಿಸಿದ್ದಾರೆ.

ಈ ಒಂದು ಮನೆಯನ್ನು
ನಾವು ಬಿಡುತ್ತಿದ್ದೇವೆ
ಆ ಮನೆಗೆ ಬೇರೆಯವರು
ಬರುತ್ತಾರೆ
ಇದು ಅಕಾಲಿಕ ಮರಣ ಹೊಂದಿದ ಹತ್ತರ ಹರೆಯದ ಪೂರ್ಣನ ಕವಿತೆ ಎಂದರೆ ನೀವು ನಂಬಲೇಬೇಕು. ಇನ್ನೊಂದು ಘಟನೆ. ತನ್ನ ನಾಯಿಯ ಕಳೆದುಕೊಂಡ ಪುಟ್ಟ ಬಾಲಕನ ಕುರಿತು.


ಕ್ಯಾನ್ಸರ್ ಪೀಡಿತ ಕೊನೆಯ ಹಂತದಲ್ಲಿದ್ದ ಸಾಕು ನಾಯಿ ಬೇಲ್ಕರ್‌ಗೆ ದಯಾಮರಣದ ಚುಚ್ಚುಮದ್ದು ಕೊಟ್ಟ ಡಾಕ್ಟರ್ ಮೈಕ್ ಶಿಷ್ಟಾಚಾರ ಪಾಲಿಸಿ, ರಾನ್ ಕುಟುಂಬದೊಂದಿಗೆ ಕೆಲವು ನಿಮಿಷಗಳನ್ನು ಕಳೆದರು. ಬೆಕ್ಕು ನಾಯಿಗಳಿಗೆಲ್ಲ ಹೆಚ್ಚೆಂದರೆ 12 ವರ್ಷ ಬದುಕುತ್ತವೆ. ಪಾಪ ಅಷ್ಟು ಚಿಕ್ಕ ಆಯುಸ್ಸನ್ನು ದೇವರು ಯಾಕೆ ಕೊಟ್ಟನೋ ಏನೋ – ಎಂಬ ಮಾತು ಬಂತು. ಅದುವರೆಗೆ ಆ ಎಲ್ಲ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ರಾನ್ ಮಗ ಶೇನ್ ಥಟ್ಟನೆ ಯಾಕೆ ಅನ್ನೋದು ನನಗೆ ಗೊತ್ತು ಡಾಕ್ಟರ್ ಎಂದ.

ಹೌದಾ?

ಹೌದು ಎನ್ನುತ್ತಾ ಎಲ್ಲರ ಮಧ್ಯೆ ಜಿಗಿದು ಡಾಕ್ಟರ್ ಮೈಕ್ ರನ್ನು ನೋಡುತ್ತ ಹೇಳಿದ ನೋಡಿ ಡಾಕ್ಟರ್, ಈಗ ಮನುಷ್ಯ 100 ವರ್ಷ ಬದುಕುತ್ತಾನೆ. ಯಾಕೆ ಅಷ್ಟು ದೊಡ್ಡ ಲೈಫ್ ಕೊಟ್ಟಿದ್ದಾನೆ ದೇವರು ಹೇಳಿ. ಯಾಕೇ ಅಂದ್ರೆ ಮನುಷ್ಯ ಹುಟ್ಟಿದ ಮೇಲೆ ಬೇರೆಯವರ ಜೊತೆ ಹೊಂದಿಕೊಂಡು ಹೋಗೋದನ್ನು ಕಲೀಬೇಕು. ಎಲ್ಲರನ್ನೂ ಪ್ರೀತಿಯಿಂದ ನೋಡೋದನ್ನು ಕಲೀಬೇಕು. ಮನೆಯವರ ಜೊತೆ ಯಾವತ್ತೂ ಖುಷಿಯಾಗಿರೋದು ಹೇಗೆ ಅನ್ನೋದನ್ನು ಕಲೀಬೇಕು. ಪ್ರಾಮಾಣಿಕನಾಗಿರುವುದನ್ನು ಕಲೀಬೇಕು. ಇಷ್ಟೆಲ್ಲಾ ವಿಷಯ ಕಲಿತು ಅಳವಡಿಸಿಕೊಂಡು ಬದುಕಬೇಕು ಅಂದ್ರೆ ನೂರು ವರ್ಷ ಬೇಕು. ಆದ್ರೆ ನಾಯಿಗೆ ಅದೆಲ್ಲ ವಿಷಯ ಕಲೀಬೇಕಾದ ಅಗತ್ಯವೇ ಇರೋದಿಲ್ಲ. ಯಾಕೇಂದ್ರೆ ಹೊಂದಿಕೊಂಡು ಹೋಗೋದು, ಪ್ರೀತಿ ಮಾಡೋದು, ಪ್ರಾಮಾಣಿಕನಾಗಿರೋದು ಇವನ್ನೆಲ್ಲ ಅದು ಹುಟ್ತಾನೇ ಕಲ್ತೇ ಬಂದಿರೋದ್ರಿಂದ, ಇಲ್ಲಿ ಈ ಜಗತ್ತಲ್ಲಿ ಕೇವಲ ಬದುಕಿಹೋದ್ರೆ ಆಯ್ತು ನೋಡಿ! ಅದಕ್ಕೆ ದೇವರು ನಾಯಿಗೆ 12 ವರ್ಷ ಬದುಕೋದಕ್ಕೆ ಅಂತ ಮಾತ್ರ ಕೊಟ್ಟಿದ್ದಾನೆ.


ಎಂತಹ ಘಟನೆ. ಇಂತಹ ನೂರಾರು ಘಟನೆಗಳ ಸಂಗ್ರಹ ರೋಹಿತ್ ಚಕ್ರತೀರ್ಥ ಅವರ ಗಂಧದಮಾಲೆ. ಓದಲೇಬೇಕಾದ ಪುಸ್ತಕ. ನಿಮಗೆ ಅನ್ನಿಸಬಹುದು, ಅನ್ನಿಸಿದರೂ ಅಚ್ಚರಿಯಿಲ್ಲ. ಪುಸ್ತಕದ ಬಗ್ಗೆಗಿಂತ ರೋಹಿತ್ ಚಕ್ರತೀರ್ಥ ಅವರ ಬಗ್ಗೆಯೇ ಹೆಚ್ಚು ಬರೆದಂತೆ ಇದೆ ಎಂದು. ಯಾವುದೇ ವಿಷಯವನ್ನು ಈಚೆಯಿಂದ ಆಚೆಗೆ ಯಾರಾದರೂ ಮುಟ್ಟಿಸಿ ಬಿಡುತ್ತಾರೆ. ಆದರೆ ತನ್ನತನವನ್ನು ಬೆರೆಸುವುದು ಆ ವಿಷಯವನ್ನು ಅರ್ಥೈಸಿಕೊಂಡವರಿಗೆ ಮಾತ್ರ ಸಾಧ್ಯ. ಅನವರತ ಮಮತೆಯಿಂದ ಚಕ್ರತೀರ್ಥ ಅವರು ಪುಟ್ಟ ಪುಟ್ಟ ವೈಶಿಷ್ಟ್ಯತೆಗಳನ್ನು ಹೆಕ್ಕಿ ಪೋಣಿಸಿದ್ದಾರೆ. ಮೂಲ ವಸ್ತುವಿಗೆ ಧಕ್ಕೆ ಬಾರದಂತೆ ಆಪ್ತತೆಯ ಹೆಣೆಯುವ ಕೆಲಸ ಅವರಿಗೆ ಸಿದ್ಧಿಸಿದೆ. ಒಮ್ಮೆಯಾದರೂ ಗಂಧದ ಮಾಲೆ ಆಸ್ವಾದಿಸಿ ಬಿಡಿ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Book ReviewGandada MaleKannada News WebsiteLatest News KannadaRohith Chakratirthaಗಂಧದ ಮಾಲೆಪುಸ್ತಕ ವಿಮರ್ಷೆರೋಹಿತ್ ಚಕ್ರತೀರ್ಥವ್ಯಕ್ತಿಚಿತ್ರ
Share242Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಮೆಕ್ಕೆಜೋಳ ಖರೀದಿಗೆ 1520 ರೂ. ಬೆಂಬಲ ಬೆಲೆ ಘೋಷಣೆ: ಸಂಸದ ರಾಘವೇಂದ್ರ ಅಭಿನಂದನೆ

Next Post

ವ್ಯಾಪಕ ವಿರೋಧದ ಹಿನ್ನೆಲೆ: ರಾಜ್ಯದಲ್ಲಿ ನೈಟ್ ಕರ್ಫ್ಯೂ ಹಿಂಪಡೆತ

kalpa News

kalpa News

Next Post
ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ಜಾರಿ: ಕ್ರಿಸ್ಮಸ್, ನ್ಯೂ ಇಯರ್ ಸೆಲಬ್ರೆಷನ್’ಗೆ ಬ್ರೇಕ್

ವ್ಯಾಪಕ ವಿರೋಧದ ಹಿನ್ನೆಲೆ: ರಾಜ್ಯದಲ್ಲಿ ನೈಟ್ ಕರ್ಫ್ಯೂ ಹಿಂಪಡೆತ

Leave a Reply Cancel reply

Your email address will not be published. Required fields are marked *

No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL