ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಹತ್ವದ ನಿರ್ಧಾರವೊಂದರಲ್ಲಿ ಬೆಂಗಳೂರು – ಕರೈಕುಡಿ ರೈಲು ಪ್ರಯಾಣಿಕರಿಗೆ ಬಿಗ್ ಗುಡ್ ನ್ಯೂಸ್ ದೊರೆತಿದೆ.
ಈ ಕುರಿತಂತೆ ನೈರುತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದ್ದು, ಕಡಿಮೆ ಪ್ರಯಾಣಿಕರ ದಟ್ಟಣೆಯ ಕಾರಣದಿಂದಾಗಿ ಈ ಹಿಂದೆ ರದ್ದುಗೊಳಿಸಲಾಗಿದ್ದ ಕೆಳಕಂಡ ವಿಶೇಷ ರೈಲು ಸೇವೆಗಳನ್ನು, ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು, ಪುನಃ ಆರಂಭಿಸಲು ನಿರ್ಧರಿಸಲಾಗಿದೆ. ಈ ರೈಲುಗಳು ತಮ್ಮ ಮೂಲ ವೇಳಾಪಟ್ಟಿಯ ಪ್ರಕಾರವೇ ಸಂಚರಿಸಲಿವೆ ಎಂದು ತಿಳಿಸಿದೆ.
ವಿವರ ಹೀಗಿದೆ:
1. ರೈಲು ಸಂಖ್ಯೆ 06243 ಮೈಸೂರು-ಕರೈಕುಡಿ ವಿಶೇಷ ಎಕ್ಸಪ್ರೆಸ್ ರೈಲು ನವೆಂಬರ್ 8, 2025 ರಂದು ತನ್ನ ಸೇವೆಯನ್ನು ಪುನರಾರಂಭಿಸಲಿದೆ ಮತ್ತು ಮೂಲ ವೇಳಾಪಟ್ಟಿಯಂತೆ ಸಂಚರಿಸಲಿದೆ.
2. ರೈಲು ಸಂಖ್ಯೆ 06244 ಕರೈಕುಡಿ-ಮೈಸೂರು ವಿಶೇಷ ಎಕ್ಸಪ್ರೆಸ್ ರೈಲು ನವೆಂಬರ್ 9, 2025 ರಂದು ತನ್ನ ಸಂಚಾರವನ್ನು ಪುನಃ ಆರಂಭಿಸಲಿದೆ.
ಪ್ರಯಾಣಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post