ಕಲ್ಪ ಮೀಡಿಯಾ ಹೌಸ್ | ಆಯನೂರು |
ರಿಪ್ಪನ್’ಪೇಟೆ ಬಳಿಯ 9ನೆಯ ಮೈಲಿಕಲ್ಲು ಬಳಿಯಲ್ಲಿ ಆಯಿಲ್ ಟ್ಯಾಂಕರ್’ವೊಂದು ಪಲ್ಟಿಯಾಗಿದ್ದು, ಸಂಭವನೀಯ ಅಪಾಯವೊಂದನ್ನು ಅಗ್ನಿ ಶಾಮಕ ಸಿಬ್ಬಂದಿ ತಪ್ಪಿಸಿದ್ದಾರೆ.
ರಿಪ್ಪನ್’ಪೇಟೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಟ್ಯಾಂಕರ್ 9ನೆಯ ಮೈಲಿಕಲ್ಲು ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ. ಟ್ಯಾಂಕರ್’ನಿಂದ ಆಯಿಲ್ ಸೋರಿಕೆಯಾಗುತ್ತಿದ್ದುದು ಆತಂಕಕ್ಕೆ ಕಾರಣವಾಗಿತ್ತು. ಆದರೆ, ಸ್ಥಳಕ್ಕೆ ತತಕ್ಷಣವೇ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಇಡಿಯ ಸ್ಥಳವನ್ನು ಸೀಲ್ ಮಾಡಿ, ಸುರಕ್ಷತಾ ಕ್ರಮಗಳನ್ನು ಕೈಗೊಂಡು ಸಂಭವನೀಯ ಅಪಾಯವೊಂದನ್ನು ತಪ್ಪಿಸಿದ್ದಾರೆ.
Also read: ದಾಸ ಸಾಹಿತ್ಯ ಎಲ್ಲಾ ಕಾಲದಲ್ಲಿಯೂ ಸ್ವೀಕೃತವಾಗಿರುವುದು ಅದರ ವಿಶೇಷ: ಡಾ.ಕೆ. ರಮಾನಂದ ಅಭಿಪ್ರಾಯ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















