ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊಸನಗರ: ಮಲೆನಾಡಿನ ಈ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ರಸ್ತೆಗಳಲ್ಲಿ ಅಡ್ಡಗಟ್ಟಿ ದರೋಡೆ ಮಾಡುತ್ತಿರುವ ಪ್ರಕರಣಗಳ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದು ಈ ಭಾಗದ ಮಂದಿಯನ್ನು ಬೆಚ್ಚಿ ಬೀಳಿಸಿದೆ.
ಹೌದು.. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲೊಂದು ಸಂದೇಶ ಹರಿದಾಡುತ್ತಿದ್ದು, ಅದು ಈ ರೀತಿಯಿದೆ.
‘ಸ್ನೇಹಿತರೆ ದಯವಿಟ್ಟು ಗಮನಿಸಿ. ಕಳೆದ ಒಂದು ವಾರದಿಂದ ಜಯನಗರ, ಹೊಸನಗರ ಸುತ್ತ ಮುತ್ತ ದರೋಡೆಕೋರರ ಗುಂಪೊಂದು ರಾತ್ರಿ ಹೊತ್ತು ಓಡಾಡುವ ಬೈಕ್‌ಗಳಿಗೆ ಅಡ್ಡಗಟ್ಟಿ ಹಣ, ಒಡವೆ, ಎಟಿಎಂ ಕಾರ್ಡ್‌ಗಳನ್ನು ಲೂಟಿ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತಲೆಕೆಡಿಸಿ ಕೊಂಡಂತಿಲ್ಲ. ಅದ್ದರಿಂದ ಸಾರ್ವಜನಿಕರು ಜಾಗ್ರತೆಯಿಂದ ಓಡಾಡಬೇಕೆಂದು ಮನವಿಯನ್ನು ಮಾಡಲಾಗಿದೆ. ನಿನ್ನೆ ಕೂಡ ಸುತ್ತ ರಸ್ತೆಯಲ್ಲಿ ಇಂತಹ ಘಟನೆ ನಡೆದಿದ್ದು ವಿಳಾಸ ಕೇಳುವ ನೆಪದಲ್ಲಿ ಗಾಡಿಯನ್ನು ನಿಲ್ಲಿಸಿ ಮುಖಕ್ಕೆ ಖಾರದ ಪುಡಿಯನ್ನು ಹಾಕಿ ದರೋಡೆ ಮಾಡಲು ಯತ್ನಿಸಿರುತ್ತಾರೆ. ದಯವಿಟ್ಟು ಮಾಹಿತಿಯನ್ನು ಶೇರ್ ಮಾಡಿ’ ಎಂದು ಬರೆಯಲಾಗಿದೆ.
ಇನ್ನು ಈ ಸಾಮಾಜಿಕ ಜಾಲತಾಣದ ಸಂದೇಶದಲ್ಲಿರುವ ಆರೋಪದಂತೆ ಪೊಲೀಸ್ ಠಾಣೆಯಲ್ಲಿ ಯಾವುದೇ ರೀತಿಯ ದೂರು ದಾಖಲಾಗಿಲ್ಲ.
ಆದರೆ, ಸ್ಥಳೀಯರು ಕೆಲವರಲ್ಲಿ ಹೇಳಿಕೊಂಡಿರುವಂತೆ, ನಗರ ಪೋಲಿಸ್ ಠಾಣಾ ವ್ಯಾಪ್ತಿಯ ನಿಟ್ಟೂರು ಸಮೀಪದ ಸಿಡ್ಲುಕುಣಿ ಎಂಬಲ್ಲಿ ದರೋಡೆಕೋರರು ಸುಜನ್ ಎನ್ನುವ ವಿದ್ಯಾರ್ಥಿಯನ್ನು ಅಡ್ಡ ಗಟ್ಟಿದ್ದು, ಅತನಿಂದ 800 ರೂಪಾಯಿ, ಹತ್ತು ಸಾವಿರ ಮೌಲ್ಯದ ಮೊಬೈಲ್, ಎಟಿಎಂ ಕಾರ್ಡ್, ಪರ್ಸ್ ಹಾಗೂ ಬೈಕ್ ಕೀ ಕಳ್ಳತನ ಮಾಡಿದ್ದಾರೆ. ಅಷ್ಟೆ ಅಲ್ಲದೆ ಬೈಕ್‌ನ ಪೆಟ್ರೋಲ್ ಪೈಪ್ ಅನ್ನು ಕೂಡ ಕತ್ತರಿಸಿದ್ದಾರೆ ಎನ್ನಲಾಗಿದೆ.
ಹಾಗೆಯೇ ವಾರದ ಹಿಂದೆ ಹೊಸನಗರದಲ್ಲಿ ಮಧ್ಯ ರಾತ್ರಿ ಸಮಾರು 2 ಗಂಟೆ ವೇಳೆಯಲ್ಲಿ ಅಣ್ಣಪ್ಪ ಎಂಬುವವರಿಗೂ ಕಳ್ಳರು ಅಡ್ಡಗಟ್ಟಿ ಲಾಂಗು-ಮಚ್ಚು ತೋರಿಸಿದ್ದರು ಎಂಬ ಮಾಹಿತಿಯೂ ಬಂದಿದೆ.
ಈ ವಿಚಾರಗಳು ಮಲೆನಾಡಿಗರಲ್ಲಿ ಭಯವನ್ನುಂಟು ಮಾಡಿದ್ದು, ಅದರಲ್ಲೂ ಈ ಭಾಗದಲ್ಲಿ ಹಳ್ಳಿಗಳಲ್ಲಿ ವಾಸಿಸುವ ಹಾಗೂ ಒಬ್ಬಂಟಿಗರಾಗಿ ತೆರಳುವವರಲ್ಲಿ ಆತಂಕವನ್ನು ಉಂಟು ಮಾಡಿದೆ.
ಇನ್ನು, ಈ ಕುರಿತಂತೆ ಪೊಲೀಸ್ ಇಲಾಖೆ ಅಭಯ ನೀಡಿದ್ದು, ಜನಸಾಮಾನ್ಯರು ಭಯ ಪಡುವ ಅಗತ್ಯವಿಲ್ಲ. ಮಲೆನಾಡು ಭಾಗದಲ್ಲಿ ಈಗಾಗಲೇ ನಾಕಬಂದಿ ಹಾಕಲಾಗಿದ್ದು, ಎಲ್ಲ ರೀತಿಯ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಈ ವಿಚಾರದಲ್ಲಿ ಯಾವುದೇ ರೀತಿಯ ಮಾಹಿತಿ ದೊರೆತರೂ ತತಕ್ಷಣ ಹತ್ತಿರದ ಠಾಣೆಗೆ ತಿಳಿಸಿ ಎಂದು ಕೋರಲಾಗಿದೆ.
ಮಾಹಿತಿ: ಮಹೇಶ್ ಹಿಂಡ್ಲಮನೆ
Get in Touch With Us info@kalpa.news Whatsapp: 9481252093
Discussion about this post