ನವದೆಹಲಿ: ಅಕ್ರಮ ಆಸ್ತಿ ಹಾಗೂ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಹಿಡಿತದಲ್ಲಿ ಸಿಲುಕಿರುವ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಇಂದೂ ಸಹ ವಿಚಾರಣೆಗೆ ಹಾಜರಾದರು.
ನವದೆಹಲಿಯ ಜಾಮ್ ನಗರ್ ಹೌಸ್ ನಲ್ಲಿರುವ ಇಡಿ ಕಾರ್ಯಾಲಯಕ್ಕೆ ಇಂದು ಖಾಸಗಿ ವಾಹನದಲ್ಲಿ ಆಗಮಿಸಿದರು.
ರಾಜಕೀಯ ಪ್ರಭಾವದ ಪರಿಣಾಮವಾಗಿ ಕೇವಲ ಹತ್ತೇ ವರ್ಷಗಳಲ್ಲಿ ಒಂದು ಸಾವಿರ ಕೋಟಿ ರೂ. ಆಸ್ತಿಪಾಸ್ತಿಯ ಒಡೆಯರಾಗಿದ್ದಾರೆ ಎಂದು ರಾಬರ್ಟ್ ವಾದ್ರಾ ವಿರುದ್ಧ ಆರೋಪಿಸಲಾಗಿದೆ.
ಅಲ್ಲದೇ, ಲಂಡನ್ ನಲ್ಲಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಖರೀದಿಸುವಲ್ಲಿ ನಡೆಸಿರುವ ವ್ಯಾಪಕ ಹಣಕಾಸು ಅಕ್ರಮಗಳಿಗಾಗಿ ಜಾರಿ ನಿರ್ದೇಶನಾಲಯದ ತನಿಖೆಯನ್ನು ಎದುರಿಸುತ್ತಿರುವ ವಾದ್ರಾ, ಫೆ.6 ಮತ್ತು 7ರಂದು ಇಡಿ ಕಾರ್ಯಾಲಯಕ್ಕೆ ಹೋಗಿದ್ದರು.
Discussion about this post