ರಾಯ್’ಪುರ: ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಛತ್ತೀಸ್’ಘಡದಲ್ಲಿ ನಕ್ಸಲರು ಅಟ್ಟಹಾಸ ಮೆರೆದು ಸ್ಫೋಟಿಸಿರುವ ಐಇಡಿಗೆ ಬಿಜೆಪಿ ಶಾಸಕ ಬಲಿಯಾಗಿದ್ದರೆ, ಐವರು ಪೊಲೀಸರು ಹುತಾತ್ಮರಾಗಿದ್ದಾರೆ.
ದಾಂತೇವಾಡದಲ್ಲಿ ಘಟನೆ ನಡೆದಿದ್ದು, ಬಿಜೆಪಿ ಶಾಸಕ ಭೀಮಾ ಮಾಂಡವಿ ಬಲಿಯಾಗಿದ್ದು, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ನಕ್ಸಲರು ಸ್ಫೋಟಿಸಿದ ಸುಧಾರಿತ ಸ್ಪೋಟಕ ಆರು ಮಂದಿಯನ್ನು ಬಲಿ ಪಡೆದಿದೆ.
ಸ್ಫೋಟದ ರಭಸಕ್ಕೆ ಶಾಸಕರಿದ್ದ ಎಸ್‌ಯುವಿ ವಾಹನ ಗಾಳಿಯಲ್ಲಿ ಮೇಲೆದ್ದು, ತುಂಡು ತುಂಡಾಯಿತು ಎನ್ನಲಾಗಿದ್ದು, ಘಟನೆಯಲ್ಲಿ ಶಾಸಕರು ಹಾಗೂ ಅವರ ಬೆಂಗಾವಲು ಪಡೆಯ ಐವರು ಪೊಲೀಸರು ಸ್ಥಳದಲ್ಲೇ ಹುತಾತ್ಮರಾಗಿದ್ದಾರೆ.
ಉಗ್ರರ ಗುಂಡಿಗೆ ಆರ್’ಎಸ್’ಎಸ್ ನಾಯಕ ಬಲಿ
ಜಮ್ಮು: ಕಿಶ್ತಾರ್ ಜಿಲ್ಲೆಯಲ್ಲಿ ಅಟ್ಟಹಾಸ ಮೆರೆದಿರುವ ಉಗ್ರರು ಆರ್’ಎಸ್’ಎಸ್ ನಾಯಕ ಚಂದ್ರಕಾಂತ್ ಶರ್ಮಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಕಿಶ್ತಾರ್ ಜಿಲ್ಲಾಸ್ಪತ್ರೆಗೆ ನುಗ್ಗಿದ ಉಗ್ರರು, ವೈದ್ಯಕೀಯ ಅಧೀಕ್ಷರಾಗಿದ್ದ ಚಂದ್ರಕಾಂತ್ ಶರ್ಮಾ ಹಾಗೂ ಅವರ ಅಂಗರಕ್ಷಕನ ಮೇಲೆ ಗುಂಡು ಹಾರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಶರ್ಮಾ ಅವರಿಗೆ ಹೆಚ್ಚಿನ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಅವರು ಬದುಕುಳಿಯಲಿಲ್ಲ. ಇನ್ನು ಘಟನೆಯಲ್ಲಿ ಗುಂಡಿನ ದಾಳಿಗೆ ಅಂಗರಕ್ಷಕ ಸ್ಥಳದಲ್ಲೇ ಬಲಿಯಾಗಿದ್ದಾನೆ.
ಘಟನೆ ಹಿನ್ನೆಲೆಯಲ್ಲಿ ಇಡಿಯ ಪ್ರದೇಶದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ದಾಳಿ ನಡೆಸಿದವರ ಪತ್ತೆಗಾಗಿ ರಕ್ಷಣಾ ಪಡೆ ತೀವ್ರ ಶೋಧ ಕಾರ್ಯಾ ಆರಂಭಿಸಿದೆ.
Discussion about this post