ಸಾಗರ: ಶಾಸಕ ಎಚ್. ಹಾಲಪ್ಪ ಅವರನ್ನು ಅವಾವ್ಯ ಶಬ್ದಗಳಿಂದ ನಿಂದಿಸಿದ್ದು, ಮಾತ್ರವಲ್ಲದೇ ನಗರದಲ್ಲಿ ಅಹಿತಕರ ಘಟನೆಗಳಿಗೆ ಕೆಲವು ಮುಸ್ಲಿಂ ಪುಡಾರಿಗಳು ಕಾರಣರಾಗುತ್ತಿದ್ದಾರೆ ಎಂದು ಆರೋಪಿಸಿ ಸಾಗರ ಠಾಣೆಯ ಎದುರು ಪ್ರತಿಭಟಿಸಿ, ಹೈಡ್ರಾಮಾ ನಡೆದ ಘಟನೆಗೆ ಇಂದು ಸಂಜೆ ನಗರ ಸಾಕ್ಷಿಯಾಗಿದೆ.
ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ನೇತೃತ್ವದಲ್ಲಿ ನಗರ ಠಾಣೆಯ ಮುಂದೆ ಭಾರೀ ಪ್ರತಿಭಟನೆ ನಡೆದಿದ್ದು, ನಗರದಲ್ಲಿ ಕೊಂಚ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಆಗಿದ್ದೇನು?
ಕನ್ನಡ ಸೇನೆ ಹೆಸರಿನಲ್ಲಿ ಸಾಗರದ ಟಿಪ್ ಟಾಪ್ ಬಷಿರ್ ನೇತೃತ್ವದಲ್ಲಿ ಮೆರವಣಿಗೆ ನಡೆಯುತ್ತಿತ್ತು. ಸಾಗರದ ಹಲವು ರಸ್ತೆಗಳಲ್ಲಿ ಕರ್ಕಶ ಶಬ್ದದೊಂದಿಗೆ ಬೈಕ್ ಚಲಾಯಿಸುವುದು, ರಸ್ತೆ ಇಕ್ಕೆಲಗಳಲ್ಲಿ ನಿಂತಿದ್ದ ಮಹಿಳೆಯರನ್ನು ಚುಡಾಯಿಸುವುದು ಸೇರಿದಂತೆ ಅನೇಕ ಅಹಿತಕರ ಘಟನೆಗಳಿಗೆ ಸಾಗರ ಇಂದು ಸಾಕ್ಷಿಯಾಗಿತ್ತು.
ನಗರದ ಚಾಮರಾಜಪೇಟೆ ಸಮೀಪ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಪಕ್ಕದ ರಸ್ತೆಯಲ್ಲಿ ಚಲಿಸುತ್ತಲಿದ್ದ ಸಾಗರದ ಶಾಸಕ ಎಚ್. ಹಾಲಪ್ಪರವರ ಕಾರಿನ ಎದುರು ಕನ್ನಡಸೇನೆಯ ಕೆಲವರು ಸೇರಿದಂತೆ ಅನೇಕ ಜನ ಪುಡಾರಿಗಳು ಶಾಸಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಗಲಭೆ ನಡೆಸಲು ಪ್ರಯತ್ನಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಇದರಿಂದ ಕುಪಿತಗೊಂಡ ಶಾಸಕರು ಹಾಗೂ ಹಲವು ಬಿಜೆಪಿ ಕಾರ್ಯಕರ್ತರು ಸಾಗರ ನಗರ ಪೋಲಿಸ್ ಠಾಣೆ ಎದುರು ಧರಣಿ ನಡೆಸುತ್ತಿದ್ದರು. ಸ್ಥಳಕ್ಕೆ ದೌಡಾಯಿಸಿದ ಸಾಗರದ ಎ.ಎಸ್.ಪಿ ಯತೀಶ್ ಗೌಡ(IPS) ಅವರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಆದರೆ, ಟಿಪ್ ಟಾಪ್ ಬಷೀರ್ ಹಾಗೂ ಗೂಂಡಾಗಳನ್ನು ಬಂಧಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಪಟ್ಟುಹಿಡಿದರು.
ಹಲವು ಬಾರಿ ಎಎಸ್’ಪಿಯವರು ಮನವಿ ಮಾಡಿದ ನಂತರ ಶಾಸಕ ಎಚ್. ಹಾಲಪ್ಪ ಹಾಗೂ ಮುಖಂಡರಾದ ಟಿ.ಡಿ. ಮೇಘರಾಜ್ ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರು ಎಎಸ್’ಪಿ ಅವರೊಂದಿಗೆ ಪೊಲೀಸ್ ಠಾಣೆಯೊಳಗೆ ಕುಳಿತು ಮಾತುಕತೆಗೆ ಒಪ್ಪಿ, ಮಾತುಕತೆ ನಡೆಸಿದ್ದಾರೆ.
ಠಾಣೆ ಹೊರಗೆ ನೂರಾರು ಜನ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕನ್ನಡಸೇನೆ ಕಾರ್ಯಕರ್ತರು ಸ್ಥಳದಲ್ಲೇ ಜಾಂಢಾ ಹೂಡಿದ್ದು ಸಾಗರ ನಗರದಲ್ಲಿ ಬಿಗುವಿನ ವಾತಾವರಣ ಸೃಷ್ಠಿಯಾಗಿದೆ.
Discussion about this post