ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ಕಂಬದ ಮೇಲೆ ದುರಸ್ಥಿ ಮಾಡುವ ವಿದ್ಯುತ್ ಪ್ರವಹಿಸಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದೆ.
ಇಂದು ಸಂಜೆ ಈ ಘಟನೆ ನಡೆದಿದ್ದು, ಮೃತ ಯುವಕನನ್ನು ನೀಚಡಿ ಗ್ರಾಮದ ಕಿರಣ್(22) ಗುತ್ತಿಗೆ ಆಧಾರದ ಮೇಲೆ ನೌಕರಿ ಮಾಡುತ್ತಿದ್ದನು ಎಂದು ಹೇಳಲಾಗಿದೆ.
ಕಂಬದ ಮೇಲೆ ದುರಸ್ಥಿ ಕಾರ್ಯ ಮಾಡುವ ಸಲುವಾಗಿ ಮೇಲೆ ಹತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿದ್ದು, ಪರಿಣಾಮವಾಗಿ ಆತನ ಅಲ್ಲೇ ಸಾವನ್ನಪ್ಪಿದ್ದಾನೆ. ಕಂಬದ ಮೇಲೆಯೇ ಮೃತ ಯುವಕನ ಶವ ನೇತಾಡುತ್ತಿದ್ದುದು ಮನಕಲುಕುವಂತಿತ್ತು.
Get In Touch With Us info@kalpa.news Whatsapp: 9481252093

















