ಕಲ್ಪ ಮೀಡಿಯಾ ಹೌಸ್ | ಸಾಗರ | ಸಂದರ್ಶನ ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ |
ಗುರು ರಾಯರ ಬೆಳ್ಳಿ ವೃಂದಾವನಕ್ಕೆ ಸುಧೀಂದ್ರ ಆಚಾರ್ಯಅವರಿಂದ ಸಾಗರದ ಮಾಧ್ವ ಸಂಘದಲ್ಲಿ ಗುರು ಪುಷ್ಯ ಯೋಗ ಆಚರಣೆಯ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸುಧೀಂದ್ರ ಆಚಾರ್ಯ ಅವರ ಜೊತೆ ಕಲ್ಪ ಮೀಡಿಯಾ ಹೌಸ್ ಮಾತನಾಡಿದ್ದು – ಪತ್ರಿಕೆಯ ಓದುಗರಿಗೆ ಈ ವಿಶೇಷ ಲೇಖನ ಹಾಗು ಗುರುರಾಯರಿಗೆ ಈ ಲೇಖನ ಸಮರ್ಪಣೆ.
16 ನೇ ಶತಮಾನದ ಸಂತ ಮತ್ತು ಗುರುಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳು ವೈಷ್ಣವ ಧರ್ಮವನ್ನು ಪ್ರತಿಪಾದಿಸಿದರು ಮತ್ತು ಮಧ್ವಾಚಾರ್ಯರ ದ್ವೈತ ತತ್ವಶಾಸ್ತ್ರವನ್ನು ಜನಪ್ರಿಯಗೊಳಿಸಿದವರಾಗಿದ್ದರು. ಕಲಿಯುಗದ ಪ್ರತ್ಯಕ್ಷ ದೈವ ಶ್ರೀ ರಾಘವೇಂದ್ರ ಸ್ವಾಮಿಗಳು.. ಹೀಗೆಂದರೆ ಸಾಕು ಕಲಿಯುಗದ ಪ್ರತ್ಯಕ್ಷ ದೈವ ಅನ್ನುತ್ತೆ ಆರಾಧಿಸೋ ಭಕ್ತ ಕೋಟಿ. ಅಸಂಖ್ಯಾತ ಭಕ್ತಗಣ ಗುರುರಾಯರ ಸನ್ನಿಧಿಗೆ ಬರುತ್ತದೆ ಎಂದರೆ ಮಂತ್ರಾಲಯದ ಸ್ಥಳ ಮಹಿಮೆ ಎಂತಹುದ್ದಿರಬೇಕು ಎಂದು ಯಾರಾದರೂ ಊಹಿಸಬಹುದು.
ಅಂದಹಾಗೆ, ಪವಾಡ ಮಾಡಿದವರೆಲ್ಲ ಮಹಾಮಹಿಮರಾಗಿಲ್ಲ. ಆದರೆ, ದೈವಾಂಶ ಸಂಭೂತರಂತೆ ಅವತರಿಸಿ ಜನರ ಕಷ್ಟ ಕಾರ್ಪಣ್ಯ ನೀಗಿದವರನ್ನ ಈ ನೆಲ ಮಹಾಮಹಿಮರೆಂದು ಗುರುತಿಸಿ, ಆರಾಧಿಸಿದೆ. ರಾಘವೇಂದ್ರ ಸ್ವಾಮಿಗಳು ಅಕ್ಷ ರಶಃ ದೈವಾಂಶಸಂಭೂತರು. ಅದಕ್ಕೇ ಅವರನ್ನು ಕಲಿಯುಗದ ಕಾಮಧೇನು’ ಎಂದೇ ಕರೆಯುವುದು ಎನ್ನುತ್ತಾರೆ ಸುಧೀಂದ್ರ ಆಚಾರ್ಯ ಅವರು!!
ಗುರು ಪುಷ್ಯ ಯೋಗವು ಸನಾತನ ಪಂಚಾಂಗದಲ್ಲಿ ಶುಭ ಯೋಗದ ಮುಹೂರ್ತ. ವೈದಿಕ ಜ್ಯೋತಿಷ್ಯದಲ್ಲಿ, ಪುಷ್ಯ ನಕ್ಷತ್ರವನ್ನು ಎಲ್ಲಾ ನಕ್ಷತ್ರಪುಂಜಗಳ ರಾಜ ಎಂದು ಪರಿಗಣಿಸಲಾಗುತ್ತದೆ. ಈ ನಕ್ಷತ್ರಪುಂಜದ ಅಧಿಪತಿ ಶನಿ ಮತ್ತು ದೇವತೆ ಗುರು. ಇದು 27 ನಕ್ಷತ್ರ ಪುಂಜಗಳಲ್ಲಿ ಎಂಟನೇ ಸ್ಥಾನವನ್ನು ಹೊಂದಿದೆ. ಎಂಟನೇ ಸಂಖ್ಯೆಯು ದುರ್ಗಾದೇವಿ ಮತ್ತು ಲಕ್ಷ್ಮೀ ದೇವಿಗೆ ಸಮರ್ಪಿತವಾಗಿದೆ.
ಗುರುವಾರ ವಿಷ್ಣು ಮತ್ತು ಗುರುವಿನ ದಿನ ಆಗಿದ್ದು ಗುರು ರಾಯರ ಬೆಳ್ಳಿ ವೃಂದಾವನಕ್ಕೆ ಸುಧೀಂದ್ರ ಆಚಾರ್ಯಅವರಿಂದ ಸಾಗರದ ಮಾಧ್ವ ಸಂಘದಲ್ಲಿ ಗುರುವಾರದಂದು ಗುರು ಪುಷ್ಯ ಯೋಗ ಆಚರಣೆ ವಿಜೃಂಭಣೆಯಿಂದ ನೆರವೇರಿತು.
ಗುರುವು ವೈದಿಕ ಜ್ಯೋತಿಷ್ಯದಲ್ಲಿ ಅತ್ಯಂತ ಶುಭ ಗ್ರಹ. ಗುರು ಗ್ರಹದಿಂದ ನಿಯಂತ್ರಿಸಲ್ಪಡುವ, ಆಳಲ್ಪಡುವ ಈ ದಿನವನ್ನು ಶುಭ ಕಾರ್ಯಗಳಿಗೆ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ.
ಈ ಸಂದರ್ಭದಲ್ಲಿ ಗುರು ರಾಯರ ಬೆಳ್ಳಿ ವೃಂದಾವನಕ್ಕೆ ಸುಧೀಂದ್ರ ಆಚಾರ್ಯ ಅವರು ವಾಯಿಸುತ್ತಿ ಪುನಶ್ಚರಣೆ , ರಾಘವೇಂದ್ರ ಅಷ್ಟೋತ್ತರ, ಪಂಚಾಮೃತ ಅಭಿಷೇಕ, ರಾಮದೇವರ ವಿಶೇಷ ಪೂಜೆ ಹಾಗೂ ವಿಶೇಷ ಅಲಂಕಾರದ ಜೊತೆಗೆ ಅಷ್ಟಾವಧಾನ ಸೇವೆ ಯೊಂದಿಗೆ ಹಸ್ತೊದಕ ದೊಂದಿಗೆ ಸಂಪನ್ನವಾಯಿತು.
ಸಮೀರ ಮಾಧ್ವ ಮಹಿಳಾ ಭಜನಾ ಮಂಡಳಿ ಯವರಿಂದ ವಿಶೇಷ ಭಜನೆ ನೆರವೇರಿತು. ಶ್ರೀ ಸುಧೀಂದ್ರ ಆಚಾರ್ಯ ಅವರಿಂದ ವಿಶೇಷ ಅಲಂಕಾರ ಪೂಜೆ ನೆರವೇರಿಸಿದರು.
ಗುರು ರಾಯರ ಬೆಳ್ಳಿ ವೃಂದಾವನದ ಬಗ್ಗೆ
ಸಾಗರದಲ್ಲಿ ಮಧ್ವ ಸಂಘವನ್ನು ಹುಟ್ಟಿ ಹಾಕಿದ ಉಳ್ಳೂರು ಗೋಪಾಲ ರಾಯರು ಮತ್ತು ರಾಜಗೋಪಾಲ್ ಮತ್ತು ವ್ಯಾಸರಾಜರು ಮತ್ತು ಭೀಮಾಚಾರ್ ಹಾಗೂ ಕೃಷ್ಣ ಮೂರ್ತಿ ಆಚಾರ್ ಇವರುಗಳು ಸಿದ್ದಾಪುರದಲ್ಲಿ ರಾಯರ ಬೆಳ್ಳಿ ವೃಂದಾವನ ಮಾಡಿಸಿ ಮಂತ್ರಾಲಯಕ್ಕೆ ಪಾದ ಯಾತ್ರೆಯ ಮೂಲಕ ಹೋಗಿ ಮಂತ್ರಾಲಯದಲ್ಲಿ ರಾಯರ ಮೃತ್ತಿಕೆಯನ್ನು ಬೆಳ್ಳಿ ವೃಂದಾವನಕ್ಕೆ ಹಾಕಿಸಿ ರಾಯರ ಮೂಲ ವೃಂದಾವನದ ಮೇಲೆ ಮೂರು ದಿನಗಳ ಕಾಲ ಇತ್ತು.
ಪೂಜೆ ಸಲ್ಲಿಸಿ ಶ್ರೀಗಳು ಕೊಟ್ಟ ನಂತರ ಅಲ್ಲಿಂದ ಉಡುಪಿಗೆ ಪಾದಯಾತ್ರೆಯ ಮೂಲಕ ಹೀಗಿ ಶ್ರೀ ಕೃಷ್ಣನ ಸನ್ನಿಧಾನದಲ್ಲಿ ರಾಯರ ಬೆಳ್ಳಿ ವೃಂದಾವನಕ್ಕೆ ಮೂರು ದಿನಗಳ ಕಾಲ ಪೂಜೆ ಸಲ್ಲಿಸಿ, ಅಲ್ಲಿ ಶ್ರೀ ವಿದ್ಯಾಮಾನ್ಯ ತೀರ್ಥರು ಪೂಜೆ ಸಲ್ಲಿಸಿ ಕೊಟ್ಟ ನಂತರ ರಾಯರ ಮಠದ ಕೃಷ್ಣ ಮೂರ್ತಿ ಆಚಾರ್ ಅವರ ಮನೆಯಲ್ಲಿ ಪ್ರತಿ ನಿತ್ಯ ಪೂಜೆ ಸಲ್ಲಿಸಲಾಗುತ್ತಿತ್ತು. ವಿಶೇಷವಾದ ಕಾರ್ಯಕ್ರಮ, ಟೀಕಾರ್ಚಾರ ಪಂಚಮಿ, ವ್ಯಾಸರಾಜರ ಆರಾಧನೆ ಮತ್ತು ರಾಯರ ಆರಾಧನೆ ಹಾಗೂ ಧಾತ್ರಿಹವನ, ಮಧ್ವನವಮಿ ಇಂತಹ ವಿಶೇಷವಾದ ದಿನಗಳಲ್ಲಿ ಮಾಧ್ವ ಸಂಘದಲ್ಲಿ ಪೂಜೆ ಮಾಡಲಾಗುತಿತ್ತು.
ಕೃಷ್ಣಮೂರ್ತಿ ಆಚಾರ್ ಅವರು ಮಾಧ್ವ ಸಂಘದಲ್ಲಿ ಉಳ್ಳೂರು ಗೋಪಾಲರಾಯರು ಬಳಿ ಮಾತನಾಡಿ, ರಾಯರ ಮಠದ ಅವರಿಗೆ ಕೊಡಬೇಕು ಎಂದು ಮಾತನಾಡಿ ನನ್ನ ಮನೆಗೆ ಕೊಟ್ಟಿದ್ದು ಕಳೆದ ಹತ್ತು ವರ್ಷಗಳಿಂದ ಗುರುರಾಯರು ಬೆಳ್ಳಿ ವೃಂದಾವನದಲ್ಲಿ ನಮ್ಮ ಮನೆಯಲ್ಲಿ ಪ್ರತಿನಿತ್ಯ ಪೂಜೆ ತೆಗೆದುಕೊಳ್ಳುತ್ತಾ ಇದ್ದು ಅದು ನನ್ನ ಸೌಭಾಗ್ಯ ಎನ್ನುತ್ತಾರೆ ಸುಧೀಂದ್ರ ಆಚಾರ್ಯ ಅವರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post