ಕಲ್ಪ ಮೀಡಿಯಾ ಹೌಸ್ | ಸಾಗರ |
ಬಿಎಸ್‌ಎನ್‌ಎಲ್ ಸಹಯೋಗದಲ್ಲಿ ದೇಶದ 4 ತಾಲ್ಲೂಕುಗಳು ಡಿಜಿಟಲ್ ಇಂಡಿಯಾ ಯೋಜನೆಗೆ ಆಯ್ಕೆಯಾಗಿದ್ದು, ಅದರಲ್ಲಿ ಸಾಗರ ತಾಲ್ಲೂಕು ಕೂಡ ಒಂದು ಆಗಿರುವುದು ಸಂತಸ ತಂದಿದ್ದು, ಕೇಂದ್ರಸರ್ಕಾರಕ್ಕೆ ಸಂಸದರಿಗೆ, BSNL ಅಧಿಕಾರಿಗಳಿಗೆ, ” NO NETWORK – NO VOTING ” ಅಭಿಯಾನದ ಹೋರಾಟಗಾರರಿಗೆ, ಮಾಧ್ಯಮ ಮಿತ್ರರಿಗೆ ಶಾಸಕ ಹರತಾಳು ಹಾಲಪ್ಪ MLA Harathalu Halappa ಅಭಿನಂದನೆ ಸಲ್ಲಿಸಿದ್ದಾರೆ.
ಡಿಜಿಟಲ್ ಇಂಡಿಯಾ ಭವ್ಯ ಭಾರತದ ಕನಸಿನ ಯೋಜನೆಯಾಗಿದ್ದು, ತಾಲ್ಲೂಕಿನ ಪ್ರತಿ ಮನೆಗೆ 4g ಸ್ಪೀಡ್ ಮಾದರಿಯಲ್ಲಿ ಇಂಟರ್ನೆಟ್ ಸೇವೆ ಲಭ್ಯವಾಗುತ್ತಿದೆ. ಇತ್ತೀಚಿಗೆ ಸಾಗರ ತಾಲ್ಲೂಕು ಗಡಿ ಭಾಗದಲ್ಲಿ ” ನೋ ನೆಟ್ ವರ್ಕ್ ನೋ ವೋಟಿಂಗ್ ” ಅಭಿಯಾನ ಆರಂಭ ಆಗಿತ್ತು. ಅಭಿಯಾನ ಇಡೀ ಭಾರತದ ಗಮನ ಸೆಳೆದಿತ್ತು. ಅದರ ಪ್ರತಿಫಲವಾಗಿ ತಾಲ್ಲೂಕಿಗೆ 36 ಹೊಸ ನೆಟ್‌ವರ್ಕ್ ಮಂಜೂರಾತಿ ಮತ್ತು ಮನೆಮನೆಗೆ ಇಂಟರ್ನೆಟ್ ಸೌಲಭ್ಯ ಲಭಿಸಲಿದೆ ಎಂದು ತಿಳಿಸಿದ್ದಾರೆ.
Also read: ಅ.18ರಂದು ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನಲ್ಲಿ ಉದ್ಯೋಗ ಮೇಳ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post